ಸಾಮಾಗ್ರಿಗಳು
ಜೋಳದ ಹಿಟ್ಟು – ಒಂದೂವರೆ ಕಪ್
ರವಾ – 1 ಕಪ್
ಮೊಸರು – ಒಂದೂವರೆ ಕಪ್
ಉಪ್ಪು – ರುಚಿಗೆ ತಕ್ಕಂತೆ
ಕ್ಯಾರೆಟ್ – 1
ಈರುಳ್ಳಿ – 1
ಕ್ಯಾಪ್ಸಿಕಂ – ಅರ್ಧ ತುಂಡು
ಎಲೆಕೋಸು – ಸಣ್ಣ ತುಂಡು
ಹಸಿಮೆಣಸಿನಕಾಯಿ – 4
ಕೊತ್ತಂಬರಿ ಸೊಪ್ಪು – ಸ್ವಲ್ಪ
ಜೀರಿಗೆ – ಅರ್ಧ ಟೀಸ್ಪೂನ್
ಅರಿಶಿನ – ಕಾಲು ಟೀಸ್ಪೂನ್
ಇಂಗು – ಒಂದು ಚಿಟಿಕೆ
ಬೇಕಿಂಗ್ ಸೋಡಾ – ಅರ್ಧ ಟೀಸ್ಪೂನ್
ಮಾಡುವ ವಿಧಾನ
ಪ್ಯಾನ್‌ಕೇಕ್‌ಗೆ ಬೇಕಾದ ಈರುಳ್ಳಿ, ಹಸಿ ಮೆಣಸಿನಕಾಯಿ, ಎಲೆಕೋಸು, ಕ್ಯಾಪ್ಸಿಕಂ ಮತ್ತು ಕೊತ್ತಂಬರಿ ಸೊಪ್ಪನ್ನು ಸಾಧ್ಯವಾದಷ್ಟು ತೆಳುವಾಗಿ ಕತ್ತರಿಸಿ ಇಟ್ಟುಕೊಳ್ಳಿ. ಅಲ್ಲದೇ ಕ್ಯಾರೆಟ್ ಅನ್ನು ಸಿಪ್ಪೆ ತೆಗೆದು ನುಣ್ಣಗೆ ತುರಿದುಕೊಳ್ಳಿ.
ಒಂದು ಮಿಕ್ಸಿಂಗ್ ಬೌಲ್‌ನಲ್ಲಿ ಜೋಳದ ಹಿಟ್ಟು, ಬಾಂಬೆ ರವೆ, ಮೊಸರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಒಮ್ಮೆ ಮಿಶ್ರಣ ಮಾಡಿ. ಬಳಿಕ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಹಾಗೂ ಹಿಟ್ಟನ್ನು ಪ್ಯಾನ್ ಕೇಕ್ ಅಥವಾ ಬ್ರೆಡ್ ದೋಸೆಗೆ ಸೂಕ್ತವಾಗುವಂತೆ ಮಿಶ್ರಣ ಮಾಡಿ.
ನೀರು ಸಾಕು ಎಂದು ನೀವು ಭಾವಿಸಿದ ಬಳಿಕ ಹಿಟ್ಟನ್ನು ಸುಮಾರು 5 ನಿಮಿಷಗಳ ಕಾಲ ನಿಲ್ಲಿಸದೆ ಮಿಶ್ರಣ ಮಾಡಬೇಕು.
ಈ ಮಿಶ್ರಣದ ಬೌಲ್ ಅನ್ನು ಮುಚ್ಚಳದಿಂದ ಮುಚ್ಚಿ ಸ್ವಲ್ಪ ಹೊತ್ತು ಪಕ್ಕಕ್ಕೆ ಇಡಿ.
10 ನಿಮಿಷಗಳ ಬಳಿಕ ಜೋಳದ ಹಿಟ್ಟಿಗೆ ಕ್ಯಾರೆಟ್, ಕ್ಯಾಪ್ಸಿಕಂ, ಎಲೆಕೋಸು, ಈರುಳ್ಳಿ, ಹಸಿ ಮೆಣಸಿನಕಾಯಿ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ ಮತ್ತೆ ಮಿಶ್ರಣ ಮಾಡಿ.
ಬಳಿಕ ಜೀರಿಗೆ, ಅರಿಶಿನ ಹಾಗೂ ಇಂಗು ಸೇರಿಸಿ ಮತ್ತೆ ಮಿಶ್ರಣ ಮಾಡಿ. ಅಂತಿಮವಾಗಿ ಅಡಿಗೆ ಸೋಡಾ ಸೇರಿಸಿ ಪಕ್ಕಕ್ಕೆ ಇಡಿ.
ಒಲೆ ಆನ್ ಮಾಡಿ ದೋಸೆ ಮಾಡಲು ಬಳಸುವ ಸಣ್ಣ ಪ್ಯಾನ್ ಅನ್ನು ಇಟ್ಟು ಲಘುವಾಗಿ ಎಣ್ಣೆ ಹಚ್ಚಬೇಕು.
ಎಣ್ಣೆ ಬಿಸಿಯಾದ ಬಳಿಕ ಹಿಟ್ಟನ್ನು ಬ್ರೆಡ್ ದೋಸೆ ಆಕಾರದಲ್ಲಿ ಹಾಕಿ ಸಮವಾಗಿ ಹರಡಿಕೊಳ್ಳಿ.
ಒಂದು ಬದಿ ಮಧ್ಯಮ ಉರಿಯಲ್ಲಿ ಸುಟ್ಟ ಬಳಿಕ ಅದನ್ನು ಇನ್ನೊಂದು ಬದಿಗೆ ತಿರುಗಿಸಿ. ಎರಡೂ ಬದಿಗಳಲ್ಲಿ ಕೆಂಪು ಮತ್ತು ಗರಿಗರಿಯಾಗುವವರೆಗೆ ಬೇಯಿಸಿದ ಬಳಿಕ ಅದನ್ನು ತಟ್ಟೆಗೆ ಹಾಕಿ ಬಿಸಿ ಬಿಸಿ ತಿನ್ನಿ