ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಸರ್ಕಾರಿ ಹಾಗೂ ಖಾಸಗಿ ವಲಯದ ಉದ್ಯೋಗಸ್ಥ ಮಹಿಳೆಯರಿಗೆ ಋತುಚಕ್ರ ರಜೆ ನೀಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ಈಗ ಹಿಂತೆಗೆದುಕೊಂಡಿದೆ.
ಇಂದು ಬೆಳಿಗ್ಗೆ ಹೋಟೇಲ್ ಅಸೋಸಿಯೇಷನ್ ಪರ ವಕೀಲರ ವಾದವನ್ನು ಮಾತ್ರ ಆಲಿಸಿ ಹೈಕೋರ್ಟ್, ಕರ್ನಾಟಕ ರಾಜ್ಯ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.
ಆದಾದ ನಂತರ ಸರ್ಕಾರ ಪರ ಅಡ್ವೋಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ ಹೈಕೋರ್ಟ್ ನ ಜಸ್ಟೀಸ್ ಜ್ಯೋತಿ ಅವರ ಪೀಠದ ಮುಂದೆ ಲಂಚ್ ಬ್ರೇಕ್ ವೇಳೆ ಹಾಜರಾಗಿ ತಡೆಯಾಜ್ಞೆ ಆದೇಶವನ್ನು ಹಿಂತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದರು.
ನಮ್ಮ ವಾದ ಕೇಳಿಲ್ಲ, ಕೇಳಿದ ಆಮೇಲೆ ಆದೇಶ ಮಾಡಿ ಅಂತ ನ್ಯಾಯಮೂರ್ತಿಗೆ ಬಳಿ ಮನವಿ ಮಾಡಿಕೊಂಡರು. ಈ ಹಿನ್ನೆಲೆ ನಾಳೆ ಮತ್ತೆ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. ಹೈಕೋರ್ಟ್ ಈ ಕೇಸ್ ಬಗ್ಗೆ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಹಾಗಾಗಿ, ಋತುಚಕ್ರ ರಜೆ ಆದೇಶಕ್ಕೆ ಇಂದು ತಡೆಯಾಜ್ಞೆ ಸಿಕ್ಕಿಲ್ಲ. ಸರ್ಕಾರಿ ವಕೀಲರ ಮನವಿ ಹಿನ್ನೆಲೆಯಲ್ಲಿ ನಾಳೆ ಮತ್ತೆ ಅರ್ಜಿ ವಿಚಾರಣೆಗೆ ಬರಲಿದೆ. ನಾಳೆಯ ವಿಚಾರಣೆಯ ಬಳಿಕ ಋತುಚಕ್ರ ರಜೆಯ ಬಗ್ಗೆ ಅಂತಿಮ ತೀರ್ಮಾನ ಹೊರಬೀಳಲಿದೆ.

