Saturday, September 27, 2025

ಎರಡು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಹಿಟ್‌&ರನ್‌ ಪ್ರಕರಣದ ಆರೋಪಿ ಅರೆಸ್ಟ್‌

ಹೊಸದಿಗಂತ ವರದಿ ಅಂಕೋಲಾ:

ಅಪಘಾತ, ಹಿಟ್ ಎಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಅಂಕೋಲಾ ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ತಮಿಳುನಾಡಿನ ತ್ರಿಚ್ಚಿನಪಳ್ಳಿ ವಡಕಿಪಟ್ಟಿ ನಿವಾಸಿ ತಂಗವೇಲ್ ಸುಬ್ರಹ್ಮಣ್ಯನ್ ಬಂಧಿತ ಆರೋಪಿಯಾಗಿದ್ದಾನೆ.
ಲಾರಿ ಚಾಲಕನಾಗಿರುವ ಈತ ಎರಡು ವರ್ಷಗಳ ಹಿಂದೆ ತಾಲೂಕಿನ ವಜ್ರಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ತನ್ನ ಟ್ಯಾಂಕರ್ ಲಾರಿಯನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿ ಬಂದು ಕಚ್ಚಾ ರಸ್ತೆಯಲ್ಲಿ ಪಂಕ್ಚರ್ ಆಗಿರುವ ಲಾರಿಯೊಂದರ ಟಯರ್ ಬದಲಾಯಿಸುತ್ತಿದ್ದ ಲಾರಿ ಚಾಲಕ ಮತ್ತು ಕ್ಲೀನರ್ ಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಲಾರಿ ಕ್ಲೀನರ್ಗಂ ಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮರಣ ಹೊಂದಲು ಕಾರಣನಾಗಿದ್ದ, ಲಾರಿಯ ಚಾಲಕನಿಗೆ ಸಹ ಗಂಭೀರವಾಗಿ ಗಾಯಗೊಳಿಸಿದ್ದ ಆರೋಪಿತ ಲಾರಿಯನ್ನು ನಿಲ್ಲಿಸದೇ ಪರಾರಿಯಾಗಿದ್ದ.

ಈ ಸಂಬಂಧಿಸಿದಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಪ್ರಕರಣ ನ್ಯಾಯಾಲಯಕ್ಕೆ ದಾಖಲಾದರೂ ಆರೋಪಿತ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ನ್ಯಾಯಾಲಯದಿಂದ ಘೋಷಣಾ
ವಾರಂಟ್ ಹೊರಡಿಸಲಾಗಿತ್ತು.

ಈ ಸಂಬಂಧಿಸಿದಂತೆ ಅಂಕೋಲಾ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ ಮಾರ್ಗದರ್ಶನದಲ್ಲಿ
ಎ.ಎಸ್.ಐ ಮಹಾಬಲೇಶ್ವರ ಗಡೇರ್ ಮತ್ತು,ಸಿ.ಎಚ್.ಸಿ ಮೋಹನ ಗೌಡ ತಮಿಳುನಾಡಿಗೆ ತೆರಳಿ ತಮಿಳುನಾಡಿನ ಕೋವಿಳ್ಕೋಡದಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ನೀಡಲಾಗಿದೆ.