Tuesday, September 16, 2025

CINE | ವಿಜಯ್‌-ರಶ್ಮಿಕಾ ಸಿನಿಮಾಕ್ಕೆ ಹಾಲಿವುಡ್‌ ನಟನ ಎಂಟ್ರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗೀತಾ ಗೋವಿಂದಂ ಹಾಗೂ ಡಿಯರ್‌ ಕಾಮ್ರೇಡ್‌ ನಂತರ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಯಾವುದೇ ಹೊಸ ಸಿನಿಮಾದಲ್ಲಿ ನಟಿಸಿಲ್ಲ. ಇದೀಗ ಇಬ್ಬರನ್ನು ಒಟ್ಟಿಗೇ ತೆರೆಯ ಮೇಲೆ ನೋಡುವ ಸಮಯ ಬಂದಿದೆ.

ವಿಜಯ್ ಹಾಗೂ ರಶ್ಮಿಕಾ ಅವರುಗಳು ಒಟ್ಟಿಗೆ ಎರಡು ಸಿನಿಮಾ ಒಪ್ಪಿಕೊಂಡಿದ್ದಾರೆ. ‘ಗೀತಾ ಗೋವಿಂದಂ 2’ ಮತ್ತು ರಾಹುಲ್ ಸಾಂಕೃತ್ಯಾಯನ ನಿರ್ದೇಶನ ಮಾಡಲಿರುವ ಹೊಸ ಸಿನಿಮಾನಲ್ಲಿ ಈ ಜೋಡಿ ಒಟ್ಟಿಗೆ ನಟಿಸಲಿದೆ. ರಾಹುಲ್ ಸಾಂಕೃತ್ಯಾಯನ ನಿರ್ದೇಶನದ ಸಿನಿಮಾ ಮೊದಲು ಚಿತ್ರೀಕರಣ ಆರಂಭಿಸಿದ್ದು, ಈ ಸಿನಿಮಾನಲ್ಲಿ ಹಾಲಿವುಡ್​ ಸಿನಿಮಾದ ಸ್ಟಾರ್ ನಟರೊಬ್ಬರು ವಿಲನ್ ಆಗಿ ಎಂಟ್ರಿ ಕೊಟ್ಟಿದ್ದಾರೆ.

ಬಲು ಜನಪ್ರಿಯ ಹಾಲಿವುಡ್ ಸಿನಿಮಾ ಆಗಿರುವ ‘ಮಮ್ಮಿ’ ಸಿನಿಮಾನಲ್ಲಿ ವಿಲನ್ ಆಗಿ ನಟಿಸಿರುವ ಅರ್ನಾಲ್ಡ್ ವೊಸ್ಲು ಇದೀಗ ತೆಲುಗು ಸಿನಿಮಾನಲ್ಲಿ ನಟಿಸಲಿದ್ದಾರೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಟಿಸುತ್ತಿರುವ ಸಿನಿಮಾನಲ್ಲಿ ಅರ್ನಾಲ್ಡ್ ವೊಸ್ಲು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಮಮ್ಮಿ’, ‘ಮಮ್ಮಿ ರಿಟರ್ನ್ಸ್’, ‘ಜಿಐ: ಜೋ’, ‘ಸ್ಪೈಡರ್ಮ್ಯಾನ್’, ‘ಗ್ರೀನ್ ಲ್ಯಾಂಟರ್ನ್’, ‘ಡಾರ್ಕ್​ಮ್ಯಾನ್’ ಇನ್ನೂ ಹಲವಾರು ಬ್ಲಾಕ್ ಬಸ್ಟರ್ ಹಾಲಿವುಡ್ ಸಿನಿಮಾಗಳಲ್ಲಿ ಅರ್ನಾಲ್ಡ್ ನಟಿಸಿದ್ದು, ಈಗ ಮೊದಲ ಬಾರಿಗೆ ಭಾರತದ ಸಿನಿಮಾನಲ್ಲಿ ನಟಿಸಲಿದ್ದಾರೆ.

ಇದನ್ನೂ ಓದಿ