Monday, September 22, 2025

ಆಸ್ಕರ್ ಪ್ರಶಸ್ತಿಗಳ ಸ್ಪರ್ಧೆಗೆ ಭಾರತದಿಂದ ‘ಹೋಮ್‌ಬೌಂಡ್’ ಸಿನಿಮಾ ಎಂಟ್ರಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

2026ರ ಆಸ್ಕರ್ (Oscars) ಪ್ರಶಸ್ತಿಗಳ ಸ್ಪರ್ಧೆಯಲ್ಲಿ ‘ಅತ್ಯುತ್ತಮ ಅಂತಾರಾಷ್ಟ್ರೀಯ ಕಥಾಚಿತ್ರ’ ವಿಭಾಗಕ್ಕೆ ಭಾರತದಿಂದ ಹಿಂದಿ ಭಾಷೆಯ ನಿರ್ದೇಶಕ ನೀರಜ್ ಘಯ್ವಾನ್ ಅವರ ‘ಹೋಮ್‌ಬೌಂಡ್’ ಸಿನಿಮಾ ಆಯ್ಕೆ ಆಗಿದೆ.

ಕರಣ್ ಜೋಹರ್ ಅವರ ‘ಧರ್ಮ ಪ್ರೊಡಕ್ಷನ್ಸ್’ ಮೂಲಕ ನಿರ್ಮಾಣ ಆಗಿರುವ ‘ಹೋಮ್‌ಬೌಂಡ್’ ಸಿನಿಮಾದಲ್ಲಿ ಇಶಾನ್ ಖಟ್ಟರ್, ವಿಶಾಲ್ ಜೇಥ್ವಾ, ಜಾನ್ವಿ ಕಪೂರ್ ಮುಂತಾದವರು ನಟಿಸಿದ್ದಾರೆ.

ತಾವು ನಿರ್ಮಾಣ ಮಾಡಿದ ‘ಹೋಮ್​ಬೌಂಡ್’ ಸಿನಿಮಾ ಆಸ್ಕರ್ ಸ್ಪರ್ಧೆಗೆ ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಿದ್ದಕ್ಕೆ ಕರಣ್ ಜೋಹರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ‘ಅಕಾಡೆಮಿ ಅವಾರ್ಡ್ಸ್​ ಸ್ಪರ್ಧೆಗೆ ಭಾರತದ ಅಧಿಕೃತ ಎಂಟ್ರಿಯಾಗಿ ಹೋಮ್​ಬೌಂಡ್ ಸಿನಿಮಾವನ್ನು ಆಯ್ಕೆ ಮಾಡಿರುವುದು ನಮಗೆ ತುಂಬಾ ಗೌರವ ತಂದಿದೆ. ನೀರಜ್ ಘಯ್ವಾನ್ ಅವರ ಈ ಸಿನಿಮಾ ಪ್ರಪಂಚದಾದ್ಯಂತ ಲಕ್ಷಾಂತರ ಹೃದಯಗಳಲ್ಲಿ ನೆಲೆ ಕಂಡುಕೊಳ್ಳುವುದು ಖಚಿತ’ ಎಂದು ಕರಣ್ ಜೋಹರ್ ಪ್ರತಿಕ್ರಿಯೆ ನೀಡಿದ್ದಾರೆ.

ನಿರ್ದೇಶಕ ನೀರಜ್ ಘಯ್ವಾನ್ ಅವರು ಕೂಡ ಸಂತಸ ಹಂಚಿಕೊಂಡಿದ್ದಾರೆ. ‘ಆಸ್ಕರ್‌ ಸ್ಪರ್ಧೆಗೆ ಭಾರತದಿಂದ ಹೋಮ್‌ಬೌಂಡ್ ಸಿನಿಮಾ ಅಧಿಕೃತವಾಗಿ ಆಯ್ಕೆ ಆಗಿರುವುದಕ್ಕೆ ನನಗೆ ತುಂಬಾ ಗೌರವ ಎನಿಸುತ್ತಿದೆ. ನಮ್ಮ ಕಥೆಗಳನ್ನು ಜಗತ್ತಿಗೆ ಕೊಂಡೊಯ್ಯುವುದು ಮತ್ತು ಸಿನಿಮಾದ ಅತಿದೊಡ್ಡ ಜಾಗತಿಕ ವೇದಿಕೆಗಳಲ್ಲಿ ಒಂದರಲ್ಲಿ ಭಾರತವನ್ನು ಪ್ರತಿನಿಧಿಸುವುದು ಹೆಮ್ಮೆಯ ವಿಷಯವಾಗಿದೆ. ಇದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ