Wednesday, November 5, 2025

CINE | ಬ್ರಹ್ಮಕಲಶ ಹಾಡಿನಲ್ಲಿ ವಾಟರ್‌ ಬಾಟಲ್‌ ಇರೋದು ಗೊತ್ತಾಗಿದ್ದು ಹೇಗೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾಂತಾರ: ಚಾಪ್ಟರ್ 1’ ಸಿನಿಮಾ ಥಿಯೇಟರ್​ನಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಆ ಬಳಿಕ ಸಿನಿಮಾ ಒಟಿಟಿಗೂ ಕಾಲಿಟ್ಟು ಗಮನ ಸೆಳೆಯುತ್ತಿದೆ. ಈ ಚಿತ್ರವನ್ನು ಎಲ್ಲರೂ ಕೊಂಡಾಡಿದರು. ಈ ಸಿನಿಮಾದ ‘ಬ್ರಹ್ಮಕಲಶ’ ಹಾಡಿನಲ್ಲಿ ಬರೋ ನೀರಿನ ಕ್ಯಾನ್ ದೃಶ್ಯ ನೋಡಿ ಅನೇಕರು ಟ್ರೋಲ್‌ ಮಾಡಿದ್ದರು.ಎಷ್ಟೇ ಪರ್ಫೆಕ್ಟ್‌ ಸಿನಿಮಾ ಆದರೂ ಒಂದು ಸಮಸ್ಯೆ ಇದ್ದಿದ್ದೆ ಎಂದು ಹೇಳಿದ್ದರು. ಈ ಬಗ್ಗೆ ತಂಡ ಸ್ಪಷ್ಟನೆ ಕೊಟ್ಟಿದೆ.

ಈ ಬಗ್ಗೆ ಚಿತ್ರದ ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಮಾತನಾಡಿದ್ದಾರೆ. ನಮ್ಮ ಗುಣಮಟ್ಟ ನಿಯಂತ್ರಕ ತಂಡ ಸ್ಟ್ರಾಂಗ್ ಆಗಿದೆ. ಪ್ರತಿ ಫ್ರೇಮ್ ಕೂಡ ನೋಡಿಯೇ ಮುಂದಿನ ಪ್ರಕ್ರಿಯೆ ಮಾಡುತ್ತಿತ್ತು. ಮೊದಲು ಓಕೆ ಆದ ಶಾಟ್​ ಅಲ್ಲಿ ಹಾಕಿರಲಿಲ್ಲ. ಅದರಲ್ಲಿ ವಾಟರ್ ಕ್ಯಾನ್ ಕೂಡ ಇರಲಿಲ್ಲ. ನಂತರ ಓಕೆ ಅಲ್ಲದೆ ಇರೋ ಶಾಟ್​ನ ನಾವು ಅಲ್ಲಿ ಕೂರಿಸಿದೆವು. ಆಗ ವಾಟರ್ ಕ್ಯಾನ್ ಕಾಣಿಸಿತು. ಈಗ ವಾಟರ್ ಕ್ಯಾನ್ ಇಲ್ಲ ಎಂದಿದ್ದಾರೆ.

ಅಲ್ಲಿ ನೋಡಲು ತುಂಬಾ ವಿಷಯಗಳಿವೆ. ಆದರೂ ಈ ವಾಟರ್ ಕ್ಯಾನ್ ಕಾಣಿಸಿದ್ದು ಹೇಗೆ ಎಂಬುದೇ ಕುತೂಹಲಕಾರಿ. ಈ ಹಾಡಿನಲ್ಲಿ ಕಾಣಿಸಿಕೊಂಡ ಜೂನಿಯರ್ ಆರ್ಟಿಸ್ಟ್ ತಾನು ಎಲ್ಲಿದ್ದೇನೆ ಎಂಬುದನ್ನು ತೋರಿಸಲು ಜೂಮ್ ಮಾಡಿ ಸ್ಕ್ರೀನ್​ಶಾಟ್ ಹಂಚಿಕೊಂಡಿದ್ದ. ಈ ವೇಳೆ ಆತನಿಗೆ ವಾಟರ್ ಕ್ಯಾನ್ ಕಾಣಿಸಿದೆ. ಸಾಂಗ್ ರಿಲೀಸ್ ಆಗಿ 10 ದಿನ ಆದ ಬಳಿಕ ಈ ವಾಟರ ಕ್ಯಾನ್ ವಿಚಾರ ಗೊತ್ತಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

error: Content is protected !!