Saturday, September 20, 2025

FOOD | ನವಣೆಯಿಂದ ಸೂಪರ್‌ ಟೇಸ್ಟಿ ಪಾಯಸ ಮಾಡ್ಬೋದು, ಹೇಗೆ?

  • ನವಣೆ- 1 ಬಟ್ಟಲು
  • ತುಪ್ಪ- 4 ಚಮಚ
  • ಗೋಡಂಬಿ- ಸ್ವಲ್ಪ
  • ದ್ರಾಕ್ಷಿ- ಸ್ವಲ್ಪ
  • ಜಾಕಾಯಿ – 1
  • ಲವಂಗದ ಪುಡಿ-ಸ್ವಲ್ಪ
  • ಬೆಲ್ಲದ ಪುಡಿ- 1/2 ಬಟ್ಟಲು
  • ಹಾಲು- 1 ಲೀಟರ್


    ಶುಚಿಗೊಳಿಸಿದ ನವಣೆಯನ್ನು 2 ಚಮಚ ತುಪ್ಪ ಹಾಕಿ ಹುರಿಯಿರಿ. ಕುಕ್ಕರ್ ಗೆ ಹುರಿದ ನವಣೆ ಮತ್ತು ಕಾಯಿಸಿದ ಹಾಲು ಬೆರೆಸಿ 3 ವಿಷಲ್ ಕೂಗಿಸಿ.ಬೆಲ್ಲದ ಪುಡಿಗೆ ಸ್ವಲ್ಪ ನೀರು ಬೆರೆಸಿ ಪಾಕ ತಯಾರಿಸಿ. ಬೆಂದ ನವಣೆಗೆ ಬೆರೆಸಿ ಕುದಿಸಿ. ಬಳಿಕ ಲವಂಗದ ಪುಡಿ ಬೆರೆಸಿ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಹಾಕಿ ಕೆಳಗಿಳಿಸಿ. ಇದೀಗ ರುಚಿಕರವಾದ ನವಣೆ ಪಾಯಸ ಸವಿಯಲು ಸಿದ್ದ.

ಇದನ್ನೂ ಓದಿ