ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಮಾಜಿ ನಟಿ ಹಾಗೂ ಮಾಡೆಲ್ ಮಮಮತಾ ಕುಲಕರ್ಣಿ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಲ್ಲಿದ್ದಾರೆ.
ಇತ್ತೀಚೆಗೆ ಆಕೆ ಗ್ಯಾಂಗ್‌ಸ್ಟರ್ ಹಾಗೂ ಭಯೋತ್ಪಾದಕ ದಾವೂದ್ ಇಬ್ರಾಹಿಂ ಹಾಗೂ ವಿಕ್ಕಿ ಗೋಸ್ವಾಮಿ ಕುರಿತಾಗಿ ಮಾತನಾಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಮಮತಾ ಕುಲಕರ್ಣಿ ಹಾಗೂ ದಾವೂದ್ ಇಬ್ರಾಹಿಂ ನಡುವೆ ಲಿಂಕ್ ಇತ್ತು. ಇವರಿಬ್ಬರೂ ರಿಲೇಷನ್‌ಷಿಪ್‌ನಲ್ಲಿದ್ದರು ಎನ್ನುವುದು ಈಗಿನವರೆಗೂ ವದಂತಿಯಾಗಿಯೇ ಉಳಿದುಕೊಂಡಿದೆ. ಮಮತಾ ಕುಲಕರ್ಣಿ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ದಾವೂದ್ ಇಬ್ರಾಹಿಂ ಜೊತೆ ದೂರ ದೂರದಲ್ಲೂ ನನಗೆ ಯಾವುದೇ ಸಂಬಂಧವಿಲ್ಲ.ಆದರೆ, ಒಬ್ಬರ ಹೆಸರಂತೂ ಖಂಡಿತವಾಗಿಯೂ ಇತ್ತು (ವಿಕ್ಕಿ ಗೋಸ್ವಾಮಿಯನ್ನು ಇಲ್ಲಿ ತಿಳಿಸಿದ್ದರು). ಆದರೆ, ನೀವು ಸರಿಯಾಗಿ ನೋಡಿದರೆ, ಆತ ಯಾವುದೇ ಬಾಂಬ್ ಬ್ಲಾಸ್ಟ್ ಅಥವಾ ದೇಶದಲ್ಲಿ ಯಾವುದೇ ರೀತಿಯ ರಾಷ್ಟ್ರವಿರೋಧಿ ಕೃತ್ಯ ಮಾಡಿರಲಿಲ್ಲ. ನಾನಂತೂ ಅವರ ಜೊತೆ ಇದ್ದಿರಲಿಲ್ಲ. ಆದರೆ, ಆತ ಭಯೋತ್ಪಾದಕನಲ್ಲ. ನಿಮಗೆ ಅದರ ವ್ಯತ್ಯಾಸ ಕೂಡ ಅರ್ಥವಾದರೆ ಸಾಕು ಎಂದು ಹೇಳಿದ್ದಾರೆ.
‘ನೀವು ದಾವೂದ್‌ನ ಹೆಸರು ತೆಗೆದುಕೊಳ್ಳುತ್ತೀರಿ. ಅದರ ಜೊತೆ ನನ್ನ ಹೆಸರನ್ನೂ ತೆಗೆದುಕೊಳ್ಳುತ್ತೀರಿ. ಬಾಂಬೆಯ ಒಳಗೆ ಅವರು ಎಂದೂ ಅವರು ಬಾಂಬ್ ಬ್ಲಾಸ್ಟ್ ಮಾಡಿರಲಿಲ್ಲ. ಇದನ್ನು ನೀವು ಎಂದಾದರೂ ಕೇಳಿದ್ದೀರಾ? ಯಾರ ಹೆಸರನ್ನು ನೀವು ಹೇಳುತ್ತಿದ್ದೀರೋ, ದಾವೂದ್‌ನ ಹೆಸರು ಎಂದಿಗೂ ಬಂದಿರಲೇ ಇಲ್ಲ. ನಾನಂತೂ ನನ್ನ ಜೀವನದಲ್ಲಿ ಅವರನ್ನು ಎಂದಿಗೂ ಭೇಟಿಯಾಗಿರಲಿಲ್ಲ’ ಎಂದು ಮಮತಾ ಕುಲಕರ್ಣಿ ಹೇಳಿದ್ದಾರೆ.
ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಕಾರಣವಾಯಿತು. ಇದರ ಬೆನ್ನಲ್ಲೇ ನಟಿ ಅಕ್ಟೋಬರ್ 30 ರಂದು ಸ್ಪಷ್ಟೀಕರಣ ವೀಡಿಯೊವನ್ನು ಬಿಡುಗಡೆ ಮಾಡಿ, ಜನರು ತಮ್ಮ ಮಾತುಗಳನ್ನು ತಿರುಚದಂತೆ ಒತ್ತಾಯಿಸಿದರು.
ಜನರು ತಮ್ಮ ಮಾತುಗಳನ್ನು ಸರಿಯಾಗಿ ಕೇಳಬೇಕು ಮತ್ತು ಋಷಿಗಳು ಮತ್ತು ಸಂತರಂತೆ ಅವರ ಬುದ್ಧಿವಂತಿಕೆಯನ್ನು ಬಳಸಿಕೊಳ್ಳಬೇಕು ಎಂದು ಮಮತಾ ಹೇಳಿದರು. ದಾವೂದ್ ಇಬ್ರಾಹಿಂ ಜೊತೆ ಯಾವುದೇ ವೈಯಕ್ತಿಕ ಅಥವಾ ವೃತ್ತಿಪರ ಸಂಬಂಧವನ್ನು ಅವರು ಸ್ಪಷ್ಟವಾಗಿ ನಿರಾಕರಿಸಿದರು, ತಮ್ಮ ಹೆಸರು ಅವನೊಂದಿಗೆ ಎಂದಿಗೂ ಸಂಬಂಧ ಹೊಂದಿಲ್ಲ ಎಂದು ಪುನರುಚ್ಚರಿಸಿದರು.
ತನ್ನ ಸ್ಪಷ್ಟೀಕರಣದಲ್ಲಿ, ಅವರು 1990 ಮತ್ತು 2000 ರ ದಶಕಗಳಲ್ಲಿ ಇದ್ದ ವಿಕಿ ಗೋಸ್ವಾಮಿ ಎಂಬ ಹೆಸರನ್ನು ಉಲ್ಲೇಖಿಸಿದ್ದಾರೆ ಮತ್ತು ಒಂದು ಹಂತದಲ್ಲಿ ಅವರು ಅವರೊಂದಿಗೆ ಸಂಬಂಧ ಹೊಂದಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ. ವರದಿಗಳ ಪ್ರಕಾರ, ಅವರೊಂದಿಗಿನ ಸಂಬಂಧವು ವೈಯಕ್ತಿಕವಾಗಿತ್ತು ಮತ್ತು ಯಾವುದೇ ಅಪರಾಧ ಅಥವಾ ರಾಷ್ಟ್ರವಿರೋಧಿ ಚಟುವಟಿಕೆಗೆ ಸಂಬಂಧಿಸಿಲ್ಲ ಎಂದಿದ್ದಾರೆ. ಮಮತಾ ಅವರ ಪ್ರಕಾರ, ಗೋಸ್ವಾಮಿ ಯಾವುದೇ ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ಎಂದಿಗೂ ಭಾಗಿಯಾಗಿರಲಿಲ್ಲ .
ಯಾರೀತ ವಿಕ್ಕಿ ಗೋಸ್ವಾಮಿ
ವಿಕ್ಕಿ ಗೋಸ್ವಾಮಿ ಮಾದಕವಸ್ತು ಕಳ್ಳಸಾಗಾಣೆದಾರ ಎಂದು ಹೇಳಲಾಗಿದೆ. ಬಹಳ ಹಿಂದಿನಿಂದಲೂ ಆತ ಡಿ-ಕಂಪನಿ ಜೊತೆ ಸಂಬಂಧ ಹೊಂದಿದ್ದಾನೆ ಎನ್ನಲಾಗಿದೆ.
ಮಮತಾ ಒಂದು ಕಾಲದಲ್ಲಿ ತನ್ನ ಅಂದ ಹಾಗೂ ನಟನೆಯಿಂದಾಗಿಯೇ ಮನೆಮಾತಾಗಿದ್ದರು ಸಿನಿಮಾ ಜೀವನದಲ್ಲಿ ಯಾರೂ ತುಳಿಯದಂಥ ಕುಸಿತ ಕಂಡು ಈಗ ಸಾಧ್ವಿಯಾಗಿ ಬದಲಾಗಿದ್ದಾರೆ. ಕಳೆದ ಪ್ರಯಾಗ್‌ರಾಜ್ ಕುಂಭಮೇಳದ ವೇಳೆ ಈಕೆಯನ್ನು ಮಹಾಮಂಡಲೇಶ್ವರಿಯಾಗಿ ಪದೋನ್ನತಿ ಮಾಡಲಾಗಿತ್ತಾದರೂ ಕೆಲವೇ ದಿನದಲ್ಲಿ ಆಕೆಯನ್ನು ಆ ಸ್ಥಾನದಿಂದ ವಜಾ ಮಾಡಲಾಗಿತ್ತು.

