ಹೊಸದಿಗಂತ ವರದಿ ಸೋಮವಾರಪೇಟೆ:
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೀದಿಗಿಳಿದ ನೂರಾರು ರೈತರು ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದರು.
ತಾಲೂಕು ರೈತ ಹೋರಾಟಸಮಿತಿ,ರೈತ ಸಂಘದ ನೇತೃತ್ವದಲ್ಲಿ ರೈತರ ಅಸ್ತಿತ್ವಕ್ಕೆ ದಕ್ಕೆ ತಂದಿರುವ
ಸಿ ಅಂಡ್ ಡಿ ಭೂಮಿ ಕಾನೂನು ವಿರೋಧಿಸಿ ನೀಡಿದ್ದ ಪ್ರತಿಭಟನೆಯ ಕರೆಗೆ ಜಿಲ್ಲೆಯ ಹಲವೆಡೆಗಳಿಂದ ನೂರಾರು ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಆರಂಭದಲ್ಲಿ ಪಟ್ಟಣದ ವೃತ್ತದಲ್ಲಿ ಸೇರಿದ ರೈತರು ಸರ್ಕಾರದ ಕ್ರಮ ಖಂಡಿಸಿ,ಕಂದಾಯ ಹಾಗೂ ಅರಣ್ಯ ಇಲಾಖೆಯ ವಿರುದ್ಧ ಹರಿಹಾಯ್ದರು,ನಂತರ ಜೆ.ಸಿ.ವೇದಿಕೆಯಲ್ಲಿ ಬಹಿರಂಗ ಸಭೆ ನಡೆಯಿತು
ಬೀದಿಗಿಳಿದ ನೂರಾರು ರೈತರು: ಸಿ ಅಂಡ್ ಡಿ ಭೂಮಿ ಕಾನೂನು ವಿರೋಧಿಸಿ ಪ್ರತಿಭಟನೆ

