‘ನನಗೀಗ 80 ವರ್ಷ, ಮೊದಲಿನಂತೆ ಓಡಾಡಲು ಆಗುತ್ತಿಲ್ಲ’: ಮುಂದಿನ ಚುನಾವಣೆಗೆ ಸ್ಪರ್ಧಿಸಲ್ಲ ಎಂದ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ವಯೋಸಹಜ ಕಾರಣಗಳು ಹಾಗೂ ಚುನಾವಣಾ ಪ್ರಚಾರಕ್ಕಾಗಿ ಓಡಾಡಲು ಆಗುತ್ತಿರುವ ದೈಹಿಕ ಕಷ್ಟಗಳಿಂದಾಗಿ ತಾವು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈ ವಯಸ್ಸಿನಲ್ಲಿ ಇನ್ನೇನು ಹೇಳಲು ಸಾಧ್ಯ? ನನಗೀಗ 80 ವರ್ಷ ವಯಸ್ಸಾಗಿದೆ. ಮೊದಲಿನಂತೆ ಎಲ್ಲಾ ಕಡೆ ಓಡಾಡಲು ಕಷ್ಟವಾಗುತ್ತಿದೆ. ಅಭಿಮಾನಿಗಳು ಮತ್ತು ಬೆಂಬಲಿಗರು ಚುನಾವಣೆಗೆ ನಿಲ್ಲುವಂತೆ ಒತ್ತಾಯಿಸುತ್ತಿದ್ದರೂ, ವಯಸ್ಸಾದ ಕಾರಣಕ್ಕೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ” ಎಂದರು. ಪಕ್ಷದಲ್ಲಿ … Continue reading ‘ನನಗೀಗ 80 ವರ್ಷ, ಮೊದಲಿನಂತೆ ಓಡಾಡಲು ಆಗುತ್ತಿಲ್ಲ’: ಮುಂದಿನ ಚುನಾವಣೆಗೆ ಸ್ಪರ್ಧಿಸಲ್ಲ ಎಂದ ಸಿದ್ದರಾಮಯ್ಯ