Wednesday, November 5, 2025

ಕ್ಷೇತ್ರ ಪಾಯಿಂಟ್ ಮಾಡಿ ಹೇಳಲು ಧೈರ್ಯವಿಲ್ಲ: ‘ವೋಟ್‌ಚೋರಿ’ ಹೇಳಿಕೆ ವಿರುದ್ಧ ನಿಖಿಲ್ ವ್ಯಂಗ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ‘ವೋಟ್‌ಚೋರಿ’ ಆರೋಪದ ಕುರಿತು ಮತ್ತೆ ಸುದ್ದಿಗೋಷ್ಠಿ ನಡೆಸಿದ್ದಕ್ಕೆ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿಯವರ ಈ ಹೇಳಿಕೆಯನ್ನು ಅವರು “ಚೈಲ್ಡಿಶ್ ಮತ್ತು ಬಾಲಿಶ” ಎಂದು ಬಣ್ಣಿಸಿ ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿಯವರು ಈ ಹಿಂದೆ ಕರ್ನಾಟಕದ ಆಳಂದ ಕ್ಷೇತ್ರವನ್ನು ಉಲ್ಲೇಖಿಸಿ ‘ವೋಟ್‌ಚೋರಿ’ ನಡೆದಿದೆ ಎಂದು ಆರೋಪಿಸಿದ್ದರು. ಈ ಕುರಿತು ಮಾತನಾಡಿದ ನಿಖಿಲ್ ಕುಮಾರಸ್ವಾಮಿ, “ರಾಹುಲ್ ಗಾಂಧಿಯದ್ದು ಚೈಲ್ಡಿಶ್ ಹೇಳಿಕೆ. ಒಂದು ಕ್ಷೇತ್ರದ ಬಗ್ಗೆ ಆರೋಪ ಮಾಡಿದ ಅವರು, ‘ವೋಟ್‌ಚೋರಿ ಆಗಿ ನಮ್ಮವರು ಸೋತಿದ್ದಾರೆ, ಬೇರೆ ಯಾರೋ ಗೆದ್ದಿದ್ದಾರೆ’ ಎಂದು ಯಾವುದೇ ನಿರ್ದಿಷ್ಟ ಕ್ಷೇತ್ರವನ್ನು ಪಾಯಿಂಟ್ ಮಾಡಿ ಹೇಳುತ್ತಿಲ್ಲ. ರಾಹುಲ್ ಗಾಂಧಿ ಏನು ಮಾಡುತ್ತಿದ್ದಾರೆ?” ಎಂದು ಪ್ರಶ್ನಿಸಿದರು.

ಇದಲ್ಲದೆ, ಬಿಹಾರ ವಿಧಾನಸಭಾ ಚುನಾವಣೆಯ ಬಗ್ಗೆಯೂ ಪ್ರಸ್ತಾಪಿಸಿದ ನಿಖಿಲ್, ರಾಹುಲ್ ಗಾಂಧಿಯವರು ಆರ್ಜೆಡಿ ಜೊತೆ ಕೈ ಜೋಡಿಸಿರುವ ಬಗ್ಗೆ ಟೀಕಿಸಿದರು. “ಬಿಹಾರದಲ್ಲಿ ಆರ್ಜೆಡಿಯನ್ನು ಮುಗಿಸಲು ರಾಹುಲ್ ಗಾಂಧಿ ಒಬ್ಬರೇ ಸಾಕು. ಅವರ ಮಾತುಗಳು ಮತ್ತು ಬಾಲಿಶವಾದ ಹೇಳಿಕೆಗಳು ಬಿಹಾರ ಚುನಾವಣೆಯಲ್ಲಿ ಆರ್ಜೆಡಿಯನ್ನು ತೀರಿಸಲು ರಾಹುಲ್ ಗಾಂಧಿ ಮತ್ತು ಅವರ ಹೇಳಿಕೆಗಳು ಸಾಕಾಗುತ್ತವೆ” ಎಂದು ವ್ಯಂಗ್ಯವಾಡಿದರು.

error: Content is protected !!