Sunday, September 14, 2025

ನಾನು ಕೂಲಿ ಸಿನಿಮಾ ಒಪ್ಪಿಕೊಳ್ಳಲೇ ಬಾರದಿತ್ತು: ಆಮೀರ್ ಖಾನ್ ಹೀಗೆ ಯಾಕೆ ಅಂದ್ರು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸೂಪರ್ ಸ್ಟಾರ್ ರಜನೀಕಾಂತ್ಅವರ ಕೂಲಿ ಸಿನಿಮಾ ಸಾಧಾರಣ ಯಶಸ್ಸನ್ನು ಪಡೆದಿದ್ದರೂ ಅಂದು ಕೊಂಡ ಮಟ್ಟಕ್ಕೆ ದೊಡ್ಡ ಯಶಸ್ಸು ಮಾತ್ರ ಈ ಸಿನಿಮಾಕ್ಕೆ ಸಿಗಲಿಲ್ಲ ಎಂದೇ ಹೇಳಬಹುದು. ಇದೇ ಸಿನಿಮಾದಲ್ಲಿ ರಜನೀಕಾಂತ್ ಜೊತೆಗೆ ರಿಯಲ್ ಸ್ಟಾರ್ ಉಪೇಂದ್ರ, ರಚಿತಾ ರಾಮ್, ಆಮೀರ್ ಖಾನ್ ಕೂಡ ಅಭಿನ ಯಿಸಿದ್ದರು.

ಸಣ್ಣ ಪುಟ್ಟ ಅಥಿತಿ ಪಾತ್ರಕ್ಕೂ ದೊಡ್ಡ ತಾರಾಗಣ ವನ್ನೇ ಈ ಸಿನಿಮಾ ಸಂಗಮ ಮಾಡಿದೆ. ಈ ಸಿನಿಮಾ ರಿಲೀಸ್ ಆಗಿ ಒಟಿಟಿಯಲ್ಲೂ ತೆರೆಕಂಡ ಬಳಿಕ ಇದೀಗ ಬಾಲಿವುಡ್ ನಟ ಆಮೀರ್ ಖಾನ್ ಅವರು ಕೂಲಿ ಸಿನಿಮಾ ಒಪ್ಪಿಕೊಳ್ಳಬಾರದಿತ್ತು ಎಂದು ಹೇಳುವಂತ ಪೋಸ್ಟ್ ಒಂದು ವೈರಲ್ ಆಗಿದ್ದು ಇದನ್ನು ಕಂಡು ಅಭಿಮಾನಿಗಳು ಕೂಡ ಅಚ್ಚರಿಗೊಂಡಿದ್ದಾರೆ.

ನಾನು ಕೂಲಿ ಸಿನಿಮಾ ಒಪ್ಪಿಕೊಳ್ಳಲೇ ಬಾರದಿತ್ತು, ತಪ್ಪು ಮಾಡಿ ಬಿಟ್ಟೆ‌ ಎಂದು ಆಮಿರ್ ಖಾನ್ ಅವರು ಹೇಳಿದ್ದಾರೆ ಎನ್ನುವ ಸ್ಕ್ರೀನ್ ಶಾರ್ಟ್ ನ ಪೋಸ್ಟ್‌ ಒಂದು ವೈರಲ್ ಆಗುತ್ತಿವೆ. ಆದರೆ ನಟ ಆಮೀರ್ ಖಾನ್ ಅವರು ಈ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಚಿತ್ರದ ಬಗ್ಗೆ ಅವರು ಯಾವುದೇ ನಕಾರಾತ್ಮಕ ಟೀಕೆ ಮಾಡಿಲ್ಲ. ಸಿನಿಮಾದ ಬಗ್ಗೆ ತನಗೆ ಗೌರವ ಹೊಂದಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ನಟ ಆಮೀರ್ ಖಾನ್ ಅವರು ಇತ್ತೀಚೆಗಷ್ಟೇ ಕೂಲಿ ಸಿನಿಮಾದ ಅತಿಥಿ ಪಾತ್ರವನ್ನು ರಜನಿ ಸರ್‌ಗೋಸ್ಕರ ಒಪ್ಪಿಕೊಂಡಿದ್ದೇನೆ. ಆದರೆ ನನ್ನ ಪಾತ್ರದ ಬಗ್ಗೆ ನನಗೆ ಅಸಮಾಧಾನವಿದೆ. ಅದನ್ನು ತೆರೆ ಮೇಲೆ ತರುವ ಹಿಂದಿನ ಉದ್ದೇಶ ಏನೆಂದು ನನಗೆ ಅರ್ಥ ವಾಗಿಲ್ಲ. ನಾನು ಈ ಸಿನಿಮಾದಲ್ಲಿ ಇಲ್ಲದಿದ್ದರೂ ಏನು ವ್ಯತ್ಯಾಸವಾಗಲಾರದು. ಈ ಸಿನಿಮಾದಲ್ಲಿ ನಾನು ಒಂದೆರೆಡು ಡೈಲಾಗ್ ಹೇಳಿ ಮಾಯವಾದಂತೆ ಇತ್ತು. ಇನ್ನು ಮುಂದಿನ ದಿನದಲ್ಲಿ ಸಿನಿಮಾ ಒಪ್ಪುವಾಗ ಹೆಚ್ಚಿನ ಕಾಳಜಿ ವಹಿಸುವೆನು ಎಂದು ಆಮಿರ್ ಖಾನ್ ಹೇಳಿದ್ದರು ಎಂಬ ಪೊಸ್ಟ್ ವೈರಲ್ ಮಾಡಲಾಗಿತ್ತು.

ಇದನ್ನೂ ಓದಿ