Friday, August 29, 2025

ಮಾಳಿಂಗರಾಯ ಗದ್ದುಗೆಯ ತೆಂಗಿನಕಾಯಿ ನನಗೇ ಬೇಕು, 5.71 ಲಕ್ಷ ಕೊಟ್ಟ ಭಕ್ತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದ ನಡೆದ ಮಾಳಿಂಗರಾಯ ಜಾತ್ರೆಯಲ್ಲಿ ದಾಖಲೆ ಮೊತ್ತಕ್ಕೆ ಮಾಳಿಂಗರಾಯ ಗದ್ದುಗೆಯ ತೆಂಗಿನಕಾಯಿ ಹರಾಜು ಆಗಿದೆ.

ವಿಜಯಪುರ ಜಿಲ್ಲೆಯ ತಿಕೋಟಾ ಗ್ರಾಮದ ಭಕ್ತನಾದ ಮಾಹಾವೀರ ಹರಕೆಯವರು ಹರಾಜಿನಲ್ಲಿ ದೇವರ ಮುಂದಿನ ಈ ತೆಂಗಿನಕಾಯಿಯನ್ನು 5,71,001 ರೂ.ಗೆ ಪಡೆದುಕೊಂಡಿದ್ದಾರೆ. ಈ ತೆಂಗಿನಕಾಯಿಯನ್ನು ಪಡೆಯಲು ಚಿಕ್ಕಲಕಿ ಗ್ರಾಮದ ಮುದುಕಪ್ಪ ಮಾಳಪ್ಪ ಪಟೇದ್ದಾರ ಮತ್ತು ಗೋಠೆ ಗ್ರಾಮದ ಸದಾಶಿವ ಮೈಗೂರರವರ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು.

ಮಹಿಮಾಂತ ಮಾಳಿಂಗರಾಯ ದೇವರ ಗದ್ದುಗೆ ಮೇಲೆ ಈ ತೆಂಗಿನಕಾಯಿಯನ್ನು ಶ್ರಾವಣ ಮಾಸದ ಒಂದು ತಿಂಗಳ ಕಾಲ ಪೂಜಿಸಲಾಗಿರುತ್ತದೆ. ಇದೇ ತೆಂಗಿನ ಕಾಯಿಯನ್ನು ಹಿಂದೊಮ್ಮೆ ಮಾಹಾವೀರ ಹರಕೆಯವರು ಹರಾಜಿನಲ್ಲಿ 6,50,001 ರೂ.ಗೆ ಪಡೆದುಕೊಂಡಿದ್ದರು. ಈಗ ಮತ್ತೆ ದಾಖಲೆಯ ಮೊತ್ತಕ್ಕೆ ಮಹಾಳಿಂಗರಾಯನ ತೆಂಗಿನಕಾಯಿ ತಮ್ಮದಾಗಿಸಿಕೊಂಡು ವಿಶೇಷ ಭಕ್ತಿ ಪ್ರದರ್ಶಿಸಿದ್ದಾರೆ.

ಇದನ್ನೂ ಓದಿ