Thursday, October 16, 2025

ಸಂವಿಧಾನ ಪ್ರಕಾರ ಎಲ್ಲವೂ ಇದ್ದರೆ ಯಾವುದು ತಪ್ಪು ಅಲ್ಲ: ದಸರಾ ಉದ್ಘಾಟನೆ ವಿಚಾರಕ್ಕೆ ಯು.ಟಿ.ಖಾದರ್ ರಿಯಾಕ್ಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂವಿಧಾನ ಪ್ರಕಾರ ದಸರಾ ಉದ್ಘಾಟನೆ ಬಗ್ಗೆ ಸರ್ಕಾರ ನಿರ್ಧಾರ ಸ್ವಾಗತ ಮಾಡಿದ್ರೆ ನಾವು ಅದನ್ನ ಒಪ್ಪಬೇಕು ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.

ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ಬಿಜೆಪಿ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದಸರಾ ಉದ್ಘಾಟನೆ ವಿಚಾರದಲ್ಲಿ ಆಡಳಿತ ಹಾಗೂ ವಿಪಕ್ಷಗಳು ಮಾತಾಡಲಿ. ಸಂವಿಧಾನ ಬದ್ಧವಾಗಿ ಇದ್ಯಾ, ಇಲ್ವಾ ಅಂತ ಮಾತ್ರ ನಾವು ನೋಡ್ತೀವಿ ಎಂದಿದ್ದಾರೆ.

ಸಂವಿಧಾನ ಪ್ರಕಾರ ಎಲ್ಲವೂ ಇದ್ದರೆ ಯಾವುದು ತಪ್ಪು ಅಲ್ಲ. ಸಂವಿಧಾನ ಬದ್ಧವಾಗಿದ್ದರೆ ಯಾರೂ ಬೇಕಾದ್ರು ದಸರಾ ಉದ್ಘಾಟನೆ ಮಾಡ್ಬಹುದು ಎಂದು ಹೇಳಿದ್ದಾರೆ.

error: Content is protected !!