Saturday, September 20, 2025

ಕಂಗನಾ ತಮಿಳುನಾಡಿಗೇನಾದ್ರೂ ಬಂದ್ರೆ ಕಪಾಳಕ್ಕೆ ಬಾರಿಸಿ: ಅಳಗಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಂಡಿ ಸಂಸದೆ ‘ಕಂಗನಾ ರಣಾವತ್ ಏನಾದ್ರೂ ತಮಿಳುನಾಡಿಗೆ ಬಂದ್ರೆ ಆಕೆಯ ಕಪಾಳಕ್ಕೆ ಬಾರಿಸಬೇಕು ಎಂದು ಕಾಂಗ್ರೆಸ್ ನಾಯಕ ಕೆಎಸ್ ಅಳಗಿರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕೆಲವು ತಿಂಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ಒಬ್ಬ ಮಹಿಳಾ ಪೊಲೀಸ್ ಅಧಿಕಾರಿ ಆಕೆಗೆ ಕಪಾಳಮೋಕ್ಷ ಮಾಡಿದ್ದರು. ಅವರು ಎಲ್ಲಿ ಹೋದರೂ ಎಲ್ಲರನ್ನೂ ನಿಂದಿಸುತ್ತಿರುತ್ತಾರೆ ಎಂದು ಪೊಲೀಸ್ ಅಧಿಕಾರಿ ಕಾರಣ ನೀಡಿದ್ದರು. ಹಾಗಾಗಿ ನಾನು ಕೃಷಿ ಕಾರ್ಮಿಕರಿಗೆ ಹೇಳಿದ್ದೆ ಒಂದೊಮ್ಮೆ ಕಂಗನಾ ತಮಿಳುನಾಡಿಗೆ ಬಂದರೆ ಆ ಪೊಲೀಸ್ ಅಧಿಕಾರಿ ಮಾಡಿದ್ದನ್ನೇ ಮಾಡಿ ಎಂದು, ಆಗ ಅವರು ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುತ್ತಾರೆ ಎಂದರು. ತಮಿಳುನಾಡು ಕಾಂಗ್ರೆಸ್​ನ ಮಾಜಿ ಅಧ್ಯಕ್ಷರೂ ಆಗಿರುವ ಅಳಗಿರಿ ರಣಾವತ್ ಅವರ ಹಿಂದಿನ ಹೇಳಿಕೆಗಳಿಂದ ಅಸಮಾಧಾನಗೊಂಡ ರೈತರ ದೂರುಗಳಿಗೆ ಪ್ರತಿಕ್ರಿಯಿಸುತ್ತಿರುವುದಾಗಿ ಹೇಳಿದರು.

ನಾವು ಎಲ್ಲಿ ಬೇಕಾದರೂ ಹೋಗಬಹುದು. ಯಾರೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಕೆಲವರು ನನ್ನನ್ನು ದ್ವೇಷಿಸಿದರೆ, ನನ್ನನ್ನು ಪ್ರೀತಿಸುವವರು ಹಲವರಿದ್ದಾರೆ. ತಮಿಳುನಾಡಿನ ಜನರು ಯಾವಾಗಲೂ ನನಗೆ ಪ್ರೀತಿಯನ್ನು ನೀಡಿದ್ದಾರೆ.ಒಬ್ಬ ವ್ಯಕ್ತಿಯ ಮಾತುಗಳು ವ್ಯತ್ಯಾಸವನ್ನುಂಟು ಮಾಡುವುದಿಲ್ಲ ಎಂದು ಕಂಗನಾ ಉತ್ತರಿಸಿದ್ದಾರೆ.

ಇದನ್ನೂ ಓದಿ