Wednesday, December 10, 2025

ಸಕ್ಕರೆ ಕಾರ್ಖಾನೆ ಪುನರ್ ಆರಂಭಿಸಲು ಎನ್.ಎಸ್.ಡಿ.ಸಿ ಹಣ ಬರದಿದ್ದರೆ ಖಾಸಗಿಯವರಿಗೆ ದೀರ್ಘಾವಧಿ ಲೀಸ್: ಸಚಿವ ಶಿವಾನಂದ ಪಾಟೀಲ್

ಹೊಸದಿಗಂತ ವರದಿ,ಬೀದರ್:

ಜಿಲ್ಲೆಯ ಹುಮನಾಬಾದ್ ತಾಲೂಕಿನ ಹಳ್ಳಿಖೇಡ್ ಗ್ರಾಮದ ಬಳಿಯಿರುವ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಗೆ ಸಾಲ ಮರುಪಾವತಿ ಮಾಡದಿರುವ ಕಾರಣ ಡಿಸಿಸಿ ಬ್ಯಾಂಕ್ ನವರು ಬೀಗ ಹಾಕಿ ಹರಾಜಿಗೆ ಮುಂದಾಗಿದ್ದಾರೆ. ಕಾರ್ಖಾನೆ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡುವುದಾಗಿ ೨೦೨೩ ವಿಧಾನಸಭೆ ಚುನಾವಣೆ ಮುನ್ನ ಆಶ್ವಾಸನೆ ನೀಡಿದ್ದರು. ಆ ಭರವಸೆ ಇದೀಗ ಠುಸ್ ಆಗಿದೆ.

ಬಿ.ಎಸ್.ಎಸ್.ಕೆ ಪುನಶ್ವೇತನಕ್ಕೆ ಸರಕಾರ ಕ್ರಮವಹಿಸಲಿದೆ ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ್ ಪಾಟೀಲ್ ಹೇಳಿದ್ದು ವಿಧಾನಸಭೆ ಕಲಾಪ ವೇಳೆ ಪ್ರಶ್ನೆಗೆ ಉತ್ತರಿಸುವ ವೇಳೆ ಹೇಳಿದ್ದಾರೆ.

ಮಂಗಳವಾರ ವಿಧಾನ ಪರಿಷತ್ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಭೀಮರಾವ್ ಬಸವರಾಜ್ ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಶಿವಾನಂದ್ ಪಾಟೀಲ್, ಕಾರ್ಖಾನೆಯ ಪುನಶ್ಚೇತನ ಪ್ರಕ್ರಿಯೆಯು 2022ರಿಂದಲೇ ಆರಂಭವಾಗಿದೆ. 2022-23ನೇ ಹಂಗಾಮಿನಿಂದ 40 ವರ್ಷಗಳ ಅವಧಿಗೆ ಎಲ್ ಆರ್ ಓ ಟಿ ಆಧಾರದ ಮೇಲೆ ಇದ್ದಲ್ಲಿ ಯಥಾಸ್ಥಿತಿಯಲ್ಲಿ ಖಾಸಗಿ ಅವರಿಗೆ ಗುತ್ತಿಗೆ ನೀಡಲು 2023ರಲ್ಲಿ ದಿನಪತ್ರಿಕೆಯಲ್ಲಿ ಟೆಂಡರ್ ಕರೆದರೂ ಸಹ ಬಿಡ್‍ದಾರರು ಆಸಕ್ತಿ ತೋರಲಿಲ್ಲ. ಎರಡನೇ ಬಾರಿಗೆ ಟೆಂಡರ್ ಕರೆದರೂ ಸಹ ಯಾರೊಬ್ಬ ಬಿಡ್‍ದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗಿಯಾಗಲಿಲ್ಲ ಎಂದು ಹೇಳಿದರು.

ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಪ್ರಸ್ತಾವವನ್ನು ಒಳಗೊಂಡಂತೆ ಒಟ್ಟು 6 ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಎನ್ ಸಿ ಡಿ ಸಿ ಯಿಂದ ನೆರವನ್ನು ಪಡೆಯುವ ಕುರಿತು ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಲಾಗುವುದು. ಎನ್ ಸಿಡಿಸಿಯಿಂದ ಆರ್ಥಿಕ ನೆರವು ಲಭ್ಯವಾಗದಿದ್ದಲ್ಲಿ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಎಲ್ ಆರ್ ಓ ಟಿ ಆಧಾರದ ಮೇಲೆ ಇದ್ದಲ್ಲಿ ಯಥಾಸ್ಥಿತಿಯಲ್ಲಿ ಖಾಸಗಿಯವರಿಗೆ ದೀರ್ಘಾವಧಿಗೆ ಗುತ್ತಿಗೆ ನೀಡಲು ಮತ್ತೊಮ್ಮೆ ಟೆಂಡರ್ ಪ್ರಕಟಣೆ ಹೊರಡಿಸಲು ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.

ಕಲಾಪದ ವೇಳೆ ಸಚಿವರು ನೀಡಿರುವ ಹೇಳಿಕೆ ರಾಜ್ಯ ಸರ್ಕಾರದ ವತಿಯಿಂದ ವಿಶೇಷ ಪ್ಯಾಕೇಜ್ ಭರವಸೆ ಬರಿಯ ಗಾಳಿ ಮಾತು ಎಂಬುದು ಖಚಿತವಾಗಿದೆ. ಸಿಎಂ ಸಿದ್ದರಾಮಯ್ಯ ಆಶ್ವಾಸನೆ ನಂಬಿ ಚುನಾವಣೆ ವೇಳೆ ಕಾಂಗ್ರೆಸ್ ಹಾಗೂ ಸಚಿವ ಈಶ್ವರ ಖಂಡ್ರೆ ಬೆಂಬಲಿಸಿದ್ದು ನಮ್ಮ ದೊಡ್ಡ ತಪ್ಪು ವಿಶೇಷ ಪ್ಯಾಕೇಜ್ ಕಾಂಗ್ರೆಸ್ ಸರ್ಕಾರದಿಂದ ನಿಂದ ಆಗಿದ ಮಾತು, ಸರ್ಕಾರವನ್ನು ನಂಬಿ ಕುಳಿತಿದ್ದಕ್ಕೆ ಈ ವರ್ಷವೂ ಕಬ್ಬು ನುರಿಸುವ ಕಾರ್ಯ ಆಗದೇ ಕಬ್ಬು ಬೆಳೆಗಾರ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ರೈತ ಮುಖಂಡ ಶಿವರಾಜ್ ಪಾಟೀಲ್, ವಿ.ಕೆ.ದೇಶಪಾಂಡೆ, ಸೋಮನಾಥ ಪಾಟೀಲ, ಬಳವಂತ ಪಾಟೀಲ ಹೆಡಗಾಪೂರ ಹೊಸ ದಿಗಂತಕ್ಕೆ ಮಾತನಾಡಿ ಸರ್ಕಾರದ ನಿಲುವು ಹಾಗೂ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿ.ಎಸ್.ಎಸ್. ಕೆ ಸಾಲದ ಸುಳಿಯಿಂದ ಹೊರತಂದು ಪುನರ್ ಆರಂಭ ಆಗುವವರೆಗೆ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

error: Content is protected !!