Friday, January 2, 2026

ಸಿಎಂ ಹೇಳಿದ್ರೆ ಕಾಲೇಜು ಹುಡುಗಿಯರಿಗೂ ಪಿರಿಯಡ್ಸ್‌ ರಜೆ ಕೊಡ್ತೀವಿ: ಡಾ. ಎಂ.ಸಿ.ಸುಧಾಕರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾಲೇಜುಗಳಲ್ಲಿ ಹೆಣ್ಣುಮಕ್ಕಳಿಗೆ ಋತುಚಕ್ರ ರಜೆ ನೀಡಲು ಸಿಎಂ ಸೂಚನೆ ನೀಡಿದ್ರೆ ರಜೆ ಘೋಷಣೆ ಮಾಡಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಕೆಲಸ ನಿರ್ವಹಿಸೋ ಹೆಣ್ಣುಮಕ್ಕಳಿಗೆ ಋತುಚಕ್ರ ರಜೆ‌ ನೀಡುವ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಾಲೇಜುಗಳಲ್ಲಿ ಹೆಣ್ಣುಮಕ್ಕಳಿಗೆ ರಜೆ ಕೊಡಬೇಕು ಅಂದರೆ ಕೊಡ್ತೀವಿ. ಸಿಎಂ ಅವರು ಈ ಬಗ್ಗೆ ಹೇಳಿದ್ರೆ ಅದೇ ಅಂತಿಮ ಎಂದರು.

ಕಾಲೇಜು ವಿದ್ಯಾರ್ಥಿನಿಯಯರು, ವಿವಿ ವಿದ್ಯಾರ್ಥಿನಿಯರಿಗೆ ಋತುಚಕ್ರ ರಜೆ ಕೊಡೋ ಬಗ್ಗೆ ಸಿಎಂ ಅವರು ಸೂಚನೆ ಕೊಟ್ಟರೆ ಮಾಡ್ತೀವಿ. ಸಿಎಂ ಆದೇಶವೇ ಅಂತಿಮ ಹೇಳಿದರು

error: Content is protected !!