Saturday, August 30, 2025

ಅಕ್ರಮವಾಗಿ ಸಂಗ್ರಹಿಸಿದ್ದ ಸಿಲಿಂಡರ್‌ಗಳು ಸ್ಫೋಟ: ಹೊತ್ತಿ ಉರಿದ ಅಂಗಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಕ್ರಮವಾಗಿ ಸಂಗ್ರಹಿಸಿದ್ದ ವಾಣಿಜ್ಯ ಸಿಲಿಂಡರ್‌ಗಳು ಸ್ಫೋಟಗೊಂಡ ಘಟನೆ ಬಾದಾಮಿ ಶಿವಾಜಿ ಸರ್ಕಲ್ ಬಳಿ ನಡೆದಿದೆ.

ದಾದಾಫಿರ್ ಜಮಾದಾರ್ ಎಂಬುವರ ಅಂಗಡಿಯಲ್ಲಿದ್ದ ಸಂಗ್ರಹಿಸಿದ್ದ 5 ಕೆಜಿ ಸಿಲಿಂಡರ್ ಸ್ಫೋಟಗೊಂಡಿದ್ದು, ಅಂಗಡಿ ಮಾಲೀಕ ಸಾಯಿಲ್ ಜಮಾದಾರ್, ದಾದಾಪಿರ್ ಜಮಾದಾರ್ ಹಾಗೂ ಬಾದಾಮಿಯ‌ ಮೂವರು ಹೋಮ್‌ಗಾರ್ಡ್‌ಗಳು ಗಾಯಗೊಂಡಿದ್ದಾರೆ.

ಗಾಯಾಳುಗಳು ಬಾದಾಮಿಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಬಾದಾಮಿ ಅಗ್ನಿಶಾಮಕದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ದಾದಾಫಿರ್ ಅಂಗಡಿ ಹೊತ್ತಿ ಉರಿದಿದ್ದು, ಸ್ಥಳಕ್ಕೆ ಬಾದಾಮಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪಟ್ಟಣದಲ್ಲಿ ರಸಮಂಜರಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮಕ್ಕೆ ಬಂದೋಬಸ್ತ್ ಮಾಡಲು ಹೋಮ್ ಗಾರ್ಡ್‌ಗಳು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅಂಗಡಿಯಲ್ಲಿ ಸ್ಫೋಟ ಸಂಭವಿಸಿದ್ದರಿಂದ ಸ್ಥಳಕ್ಕೆ ಬಂದಿದಾರೆ. ದಾಪಿರ್ ಜೊತೆ ಬಂದು ಅಂಗಡಿ ಬಾಗಿಲು ತೆಗೆದಾಗ ಬೆಂಕಿ ಹೊರ ಚಿಮ್ಮಿದರಿಂದ ಹೋಮ್ ಗಾರ್ಡ್‌ಗಳು ಗಾಯಗೊಂಡಿದ್ದಾರೆ.

ಇದನ್ನೂ ಓದಿ