Friday, October 24, 2025

ಕ್ಷಣ ಮಾತ್ರದಲ್ಲಿ ಬೆಳಕೆಲ್ಲಾ ಕತ್ತಲಾಗೋಯ್ತು! ಪಟಾಕಿ ಅವಘಡಕ್ಕೆ ಬೆಂಗಳೂರಿನಲ್ಲಿ ಆಸ್ಪತ್ರೆ ಸೇರಿದ 68 ಮಂದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಳಕಿನ ಹಬ್ಬದಲ್ಲಿ ಪಟಾಕಿ ಸಿಡಿಸಿಕೊಂಡು ಬೆಂಗಳೂರಿನಲ್ಲಿ ಒಟ್ಟಾರೆ 68 ಮಂದಿ ಕಣ್ಣಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಳೆದೆರಡು ದಿನದಿಂದ ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ 25 ಜನ ಪಟಾಕಿ ಸಿಡಿದು ಕಣ್ಣಿಗೆ ಹಾನಿಯಾಗಿ ದಾಖಲಾಗಿದ್ದಾರೆ. ನಾರಾಯಣ ನೇತ್ರಾಲಯದಲ್ಲಿ 43 ಜನ ಪಟಾಕಿ ಸಿಡಿತದಿಂದ ಗಾಯಗೊಂಡು ಚಿಕಿತ್ಸೆ ಪಡೆದಿದ್ದಾರೆ. ಮೂರು ಜನರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮಿಂಟೋ ಆಸ್ಪತ್ರೆಯಲ್ಲಿ ದಾಖಲಾದ ನಾಲ್ಕು ಜನರಿಗೆ ಗಂಭೀರವಾಗಿ ಕಣ್ಣಿನ ಭಾಗಕ್ಕೆ ಗಾಯವಾಗಿದೆ.

ಬಿಹಾರ ಮೂಲದ 16 ವರ್ಷದ ಬಾಲಕ ಪಟಾಕಿ ಸಿಡಿದು ದೃಷ್ಟಿ ಕಳೆದುಕೊಂಡಿದ್ದಾನೆ. 18 ವರ್ಷದ ಯುವಕನೊಬ್ಬ ಕುಡಿದು ಪಟಾಕಿ ಹಚ್ಚಲು ಹೋಗಿ, ಹಚ್ಚುತ್ತಿದ್ದ ವೇಳೆಯಲ್ಲಿಯೇ ಸ್ಫೋಟಗೊಂಡು ಕಣ್ಣಿಗೆ ಗಂಭೀರವಾಗಿ ಹಾನಿಯಾಗಿದೆ. 10 ವರ್ಷದ ಬಾಲಕನ ಮುಖದ ಬಳಿಯೇ ಪಟಾಕಿ ಸ್ಫೋಟಗೊಂಡು ಕಣ್ಣಿನ ರೆಪ್ಪೆ ಸುಟ್ಟುಹೋಗಿದೆ. ಇದರಿಂದ ದೃಷ್ಟಿ ಸಮಸ್ಯೆ ಎದುರಾಗಿದೆ. ಗಾಯಾಳುಗಳಿಗೆ ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

error: Content is protected !!