ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು 75ನೇ ವರ್ಷದ ಹುಟ್ಟುಹಬ್ಬಕ್ಕೆ ಜನಸಾಮಾನ್ಯರು ಸೇರಿ ವಿವಿಧ ಕ್ಷೇತ್ರಗಳ ಗಣ್ಯರೂ ಶುಭಾಶಯಗಳ ಮಳೆ ಹರಿಸಿದ್ದಾರೆ. ತೆಲುಗು ಸೂಪರ್ ಸ್ಟಾರ್ ನಾಗಾರ್ಜುನ ಅಕ್ಕಿನೇನಿ, ಕಳೆದ ಸಂಜೆಯೇ ಮೋದಿ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದರು. 2014ರಲ್ಲಿ ಪ್ರಧಾನಿಯೊಂದಿಗಿನ ತಮ್ಮ ಮೊದಲ ಭೇಟಿ ಮತ್ತು ಅವರು ಕಲಿತ ಜೀವನ ಪಾಠಗಳನ್ನು ನೆನಪಿಸಿಕೊಳ್ಳುವ ವಿಡಿಯೋವನ್ನು ನಟ ಹಂಚಿಕೊಂಡಿದ್ದಾರೆ.
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಅಕ್ಕಿನೇನಿ, “ನರೇಂದ್ರ ಮೋದಿ ಅವರು ತಮ್ಮ 75ನೇ ಹುಟ್ಟುಹಬ್ಬ ಸಮೀಪಿಸುತ್ತಿರುವಾಗ, 2014 ರಲ್ಲಿ ಅವರೊಂದಿಗಿನ ನನ್ನ ಮೊದಲ ಭೇಟಿಯನ್ನು ನಾನು ನೆನಪಿಸಿಕೊಳ್ಳುತ್ತೇನೆ – ಸ್ಫೂರ್ತಿ, ದಯೆ ಮತ್ತು ಜೀವನ ಪಾಠಗಳ ಕ್ಷಣ. ಅವರ ಉತ್ತಮ ಆರೋಗ್ಯ ಮತ್ತು ಮುಂದುವರಿದ ನಾಯಕತ್ವಕ್ಕಾಗಿ ಪ್ರಾರ್ಥನೆಗಳೊಂದಿಗೆ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತೇನೆ” ಎಂದು ಬರೆದುಕೊಂಡಿದ್ದಾರೆ.
https://x.com/iamnagarjuna/status/1967879634537562413
‘ಪ್ರಧಾನಿ ನನಗೆ ವಿನಮ್ರತೆಯನ್ನು ಕಾಯ್ದುಕೊಳ್ಳಲು ಮತ್ತು ಸಹಾನುಭೂತಿಯನ್ನು ಒಂದು ಪ್ರಮುಖ ಗುಣವಾಗಿರಿಸಿಕೊಳ್ಳಲು ತಿಳಿಸಿದ್ದರು. ನನ್ನ ತಂದೆಯ ಶತಮಾನೋತ್ಸವದ ವರ್ಷದಲ್ಲಿ ಮೋದಿ ಜಿ, ತಂದೆಯನ್ನು ನೆನಪಿಸಿಕೊಂಡರು. ಸರ್, ಭಾರತಕ್ಕೆ ನಿಮ್ಮ ಅವಶ್ಯಕತೆ ಇದೆ’ ಎಂದು ನಟ ತಿಳಿಸಿದ್ದಾರೆ.