Thursday, September 25, 2025

ಭಾರತ,ಪಾಕ್ ಮ್ಯಾಚ್ ಈಗಲೂ ಆಗುತ್ತೆ…ನನ್ನ ಸಿನಿಮಾಗೆ ಮಾತ್ರ ನಿಷೇಧವೇ?: ದಿಲ್ಜಿತ್ ದೋಸಾಂಜ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ನಟನೊಂದಿಗೆ ‘Sardaar Ji 3’ ಚಿತ್ರದಲ್ಲಿ ನಟಿಸಿದ್ದಕ್ಕಾಗಿ ದೇಶ ವಿರೋಧಿ ಎಂದು ಬಿಂಬಿಸಿದ್ದ ಪಂಜಾಬಿ ಸ್ಟಾರ್ ದಿಲ್ಜಿತ್ ದೋಸಾಂಜ್, ಭಾರತ ಮತ್ತು ಪಾಕಿಸ್ತಾನ ಈಗಲೂ ಕ್ರಿಕೆಟ್ ಆಡುತ್ತಿವೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಹನಿಯಾ ಅಮೀರ್ ಅಭಿನಯಿಸಿದ್ದ ‘Sardaar Ji 3 ಭಾರತದಲ್ಲಿ ಬಿಡುಗಡೆಯಾಗಿರಲಿಲ್ಲ. ಆದರೆ, ವಿದೇಶದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

ಬಳಿಕ ಇದು ಸಾಮಾಜಿಕ ಮಾಧ್ಯಮಗಳಲ್ಲಿ ದೋಸಾಂಜ್ ಅನ್ನು ನಿಷೇಧಿಸಬೇಕೆಂದು ಕೆಲವು ನೆಟ್ಟಿಗರು ಹೇಳಿದ್ದರು.

ಈ ಕುರಿತು ಮಾತನಾಡಿದ ದೋಸಾಂಜ್, ಮಾಧ್ಯಮಗಳು ನನ್ನನ್ನು ದೇಶವಿರೋಧಿ ಎಂದು ಬಿಂಬಿಸಲು ಪ್ರಯತ್ನಿಸಿದವು ಆದರೆ ಪಂಜಾಬಿಗಳು ಮತ್ತು ಸಿಖ್ ಸಮುದಾಯವು ಎಂದಿಗೂ ರಾಷ್ಟ್ರದ ವಿರುದ್ಧ ಹೋಗಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಫೆಬ್ರವರಿಯಲ್ಲಿ ‘Sardaar Ji 3’ ಶೂಟಿಂಗ್ ಪೂರ್ಣಗೊಂಡಾಗ ಪಂದ್ಯಗಳು ನಡೆಯುತ್ತಿದ್ದವು. ತದನಂತರ ಪಹಲ್ಗಾಮ್ ಭಯೋತ್ಪಾದಕ ದಾಳಿ ಸಂಭವಿಸಿತು. ಆ ವೇಳೆ, ಈಗಲೂ ಸಹ ಭಯೋತ್ಪಾದಕರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ನಾವು ಪ್ರಾರ್ಥಿಸುತ್ತೇವೆ. ಆದರೆ ಒಂದು ವ್ಯತ್ಯಾಸವೇನೆಂದರೆ ದಾಳಿಗೂ ಮುನ್ನ ನನ್ನ ಚಿತ್ರವನ್ನು ಶೂಟಿಂಗ್ ಮಾಡಲಾಗಿತ್ತು. ಪಂದ್ಯಗಳು ಇಂದು ಕೂಡಾ ನಡೆಯುತ್ತಿವೆ ಎಂದು ದೋಸಾಂಜ್ ತಿಳಿಸಿದರು.

ಇದನ್ನೂ ಓದಿ