Sunday, August 31, 2025

ಭಾರತೀಯ ರಾಯಭಾರಿ ಜೆ.ಪಿ. ಸಿಂಗ್ ಭೇಟಿಯಾದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇಂದು ಭಾರತೀಯ ರಾಯಭಾರಿ ಜೆ.ಪಿ. ಸಿಂಗ್ ಅವರನ್ನು ಭೇಟಿಯಾದರು. ಭಾರತ ಮತ್ತು ಇಸ್ರೇಲ್ ನಡುವಿನ ದ್ವಿಪಕ್ಷೀಯ ಸಹಕಾರದ ವಿಸ್ತರಣೆಯ ಕುರಿತು ಇಬ್ಬರೂ ಚರ್ಚಿಸಿದರು.

“ಪ್ರಧಾನಿ ಬೆಂಜಮಿನ್ ನೆತನ್ಯಾಹು ಇಂದು ತಮ್ಮ ಜೆರುಸಲೆಮ್ ಕಚೇರಿಯಲ್ಲಿ ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರಿ ಜೆ.ಪಿ. ಸಿಂಗ್ ಅವರನ್ನು ಭೇಟಿಯಾದರು. ಪ್ರಧಾನಿ ಮತ್ತು ರಾಯಭಾರಿ ದ್ವಿಪಕ್ಷೀಯ ಸಹಕಾರದ ವಿಸ್ತರಣೆಯ ಬಗ್ಗೆ, ವಿಶೇಷವಾಗಿ ಭದ್ರತೆ ಮತ್ತು ಆರ್ಥಿಕ ವಿಷಯಗಳ ಕುರಿತು ಚರ್ಚಿಸಿದರು” ಎಂದು ಇಸ್ರೇಲ್ ಪ್ರಧಾನಿ ಕಚೇರಿ X ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದೆ.

ಇದನ್ನೂ ಓದಿ