Thursday, October 23, 2025

ಮೋದಿ ನಾಯಕತ್ವದ ಭಾರತ ಅತ್ಯಧಿಕ ಆರ್ಥಿಕ ಬೆಳವಣಿಗೆ: ವ್ಲಾಡಿಮಿರ್ ಪುಟಿನ್ ಶ್ಲಾಘನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮೋದಿ ನಾಯಕತ್ವದ ಭಾರತ ಅತ್ಯಧಿಕ ಆರ್ಥಿಕ ಬೆಳವಣಿಗೆ ಸಾಧಿಸಿರುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶ್ಲಾಘಿಸಿದ್ದಾರೆ.

ಹೌದು. ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ವ್ಲಾಡಿಮಿರ್ ಪುಟಿನ್, ರಷ್ಯಾ ಮತ್ತು ಭಾರತ ನಡುವಿನ ಸದೃಢ ಸಂಬಂಧವನ್ನು ಪುನರುಚ್ಚರಿಸಿದ್ದಾರೆ. ರಷ್ಯಾ ಸರ್ಕಾರದ ಸದಸ್ಯರೊಂದಿಗಿನ ಸಭೆಯಲ್ಲಿ ಪ್ರಧಾನಿ ಮೋದಿ ಜೊತೆಗಿನ ಮಾತುಕತೆಯ ವಿವರಗಳನ್ನು ಪುಟಿನ್ ಹಂಚಿಕೊಂಡಿರುವುದಾಗಿ ಕ್ರೆಮ್ಲಿನ್‌ನ ಅಧಿಕೃತ ವೆಬ್‌ಸೈಟ್ ವರದಿ ಮಾಡಿದೆ.

ರಷ್ಯಾ- ಭಾರತದ ಸಂಬಂಧಗಳನ್ನು ‘ರಾಷ್ಟ್ರೀಯ ಒಮ್ಮತದ ಆಧಾರದ ಮೇಲೆ’ ಸ್ಥಿರವಾದದ್ದು ಎಂದು ಹೇಳಿರುವ ಪುಟಿನ್, ಮೋದಿಯವರ ನಾಯಕತ್ವದಲ್ಲಿ ಆಡಳಿತ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಭಾರತದ ಸಾಧನೆಗಳನ್ನು ಶ್ಲಾಘಿಸಿದ್ದಾರೆ.

error: Content is protected !!