Monday, September 22, 2025

ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿಗೂ ಸೈಬರ್ ವಂಚಕರ ಕಾಟ: ದೂರು ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿಗೂ ಸೈಬರ್ ವಂಚಕರು ಕಾಟ ಕೊಟ್ಟಿದ್ದು, ದೂರ ಸಂಪರ್ಕ ಸಚಿವಾಲಯದ ಉದ್ಯೋಗಿ ಎಂದು ವಂಚನೆಗೆ ಯತ್ನಿಸಿರುವಂತ ಘಟನೆ ನಡೆದಿದೆ.

ಸೆಪ್ಟೆಂಬರ್.5ರಂದು ಕರೆ ಮಾಡಿದ ಸೈಬರ್ ವಂಚಕನೊಬ್ಬ ತಾನು ದೂರ ಸಂಪರ್ಕ ಸಚಿವಾಲಯದ ಉದ್ಯೋಗಿ ಎಂಬುದಾಗಿ ಪರಿಚಯಿಸಿಕೊಂಡಿದ್ದಾನೆ. ಆ ಬಳಿಕ ನಿಮ್ಮ ನಂಬರ್ ಆಧಾರ್ ಗೆ ಲಿಂಕ್ ಮಾಡದೇ ನೋಂದಾಯಿಸಲಾಗಿದೆ ಎಂದು ಹೇಳಿದ್ದಾನೆ.

ಅಲ್ಲದೇ ನಿಮ್ಮ ನಂಬರ್ ಗೆ ಅಶ್ಲೀಲ ವೀಡಿಯೋ ಕಳಿಸಲಾಗ್ತಿದೆ. ಅದನ್ನು ನಿಲ್ಲಿಸಲಾಗಿದೆ ಎಂದು ಬೆದರಿಕೆ ಹಾಕಿದ್ದಾನೆ. ಹೀಗಾಗಿ ಸೈಬರ್ ವಂಚಕನ ವಿರುದ್ಧ ದೂರು ನೀಡಲಾಗಿದೆ.

ಇದನ್ನೂ ಓದಿ