ಹೊಸದಿಗಂತ ಡಿಜಿಟಲ್ ಡೆಸ್ಕ್:
ಶೂನ್ಯ ಬಡ್ಡಿ ಆಸೆ ತೋರಿಸಿ ಅಡಮಾನ ಇಟ್ಟ ಕೆಜಿಗಟ್ಟಲೆ ಚಿನ್ನದ ಜೊತೆ ನಕಲಿ ಕಂಪನಿಯವರು ಪರಾರಿಯಾಗಿದ್ದ ಬೆಂಗಳೂರಿನಲ್ಲಿ ನಡೆದಿದೆ.
ವಿದ್ಯಾರಣ್ಯಪುರದ ಎಮಿರೇಟ್ ಎಂಬ ಕಂಪನಿಯಲ್ಲಿ ಚಿನ್ನ ಅಡಮಾನ ಇಟ್ಟವರಿಗೆ 11 ತಿಂಗಳು ಬಡ್ಡಿ ಇಲ್ಲದೇ ಸಾಲ ಕೊಡಲಾಗುತ್ತಿತ್ತು. ಚಿನ್ನಾಭರಣದ ಮೌಲ್ಯದ 50 ರಿಂದ 60% ಸಾಲ ಕೊಡುತ್ತಿದ್ದರು. ಅಡಮಾನವಿಟ್ಟ 11 ತಿಂಗಳವರೆಗೆ ಯಾವುದೇ ಕಾರಣಕ್ಕೂ ಚಿನ್ನ ಬಿಡಿಸಿಕೊಳ್ಳಲು ಅವಕಾಶವಿರಲಿಲ್ಲ. ಬಡ್ಡಿ ಇಲ್ಲವಲ್ಲ ಎಂದು ನಂಬಿ ಚಿನ್ನ ಅಡಮಾನವಿಟ್ಟು ಸಾಕಷ್ಟು ಜನ ಸಾಲ ಪಡೆದಿದ್ದರು. 11 ತಿಂಗಳ ನಂತರ ಕಂಪನಿ ಬಳಿ ಹೋಗಿ ನೋಡಿದಾಗ ಚಿನ್ನದ ಜೊತೆ ಆರೋಪಿಗಳು ಪರಾರಿಯಾಗಿದ್ದರು.
ಈ ಬಗ್ಗೆ ಸಿಸಿಬಿ ಪೊಲೀಸರಿಗೆ ದೂರು ಬಂದ ಹಿನ್ನೆಲೆ ತನಿಖೆ ನಡೆಸಿ, ಸಿಸಿಬಿ ಆರ್ಥಿಕ ಅಪರಾಧ ದಳದ ಅಧಿಕಾರಿಗಳು ಸಲಾಮ್, ಅಜಿತ್ ಬಂಧಿತ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರು ಮಾತ್ರವಲ್ಲದೇ ಕೇರಳ, ಮಂಗಳೂರಿನಲ್ಲಿ ಇದೇ ರೀತಿ ಹಲವರಿಗೆ ವಂಚಿಸಿದ್ದ ಬಂಧಿತರಿಂದ 1.8 ಕೋಟಿ ಮೌಲ್ಯದ 1 ಕೆಜಿ 450 ಗ್ರಾಂ ಚಿನ್ನಾಭರಣ, ಐದು ಕೆಜಿ ಬೆಳ್ಳಿ, ಚಿನ್ನ ಕರಗಿಸುವ ಯಂತ್ರ ವಶಕ್ಕೆ ಪಡೆಯಲಾಗಿದೆ.

