Sunday, November 23, 2025

ಪೀಕ್‌ ಅವರ್‌ನಲ್ಲಿ ಕಾರ್‌ ಓಡಾಟ ಇಲ್ವಾ? ಒಬ್ರೆ ಓಡಾಡಿದ್ರೆ ದಂಡ ಗ್ಯಾರಂಟಿನಾ??

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪೀಕ್​ ಅವರ್​ ವೇಳೆ ಕಾರಿನಲ್ಲಿ ಹೋಗುವವರಿಗೆ ದಂಡ ವಿಧಿಸಲಾಗುತ್ತೆ ಎಂಬ ಸುದ್ದಿ ಎಲ್ಲೆಡೆ ವೈರಲ್‌ ಆಗಿತ್ತು. ರಾಜಧಾನಿ ಬೆಂಗಳೂರಿನ ಬಹುದೊಡ್ಡ ಸಮಸ್ಯೆ ಟ್ರಾಫಿಕ್‌ ಜಾಮ್‌! ಇದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದೆ.

ಪೀಕ್‌ ಅವರ್‌ ಅಂದರೆ ಶಾಲಾ,ಕಾಲೇಜು, ಆಫೀಸ್‌ಗೆ ಹೋಗುವ ಹಾಗೂ ವಾಪಾಸ್‌ ಮನೆಗೆ ಹೋಗುವ ಸಮಯವಾಗಿದೆ. ಈ ಸಮಯದಲ್ಲಿ ಕಾರ್‌ನಲ್ಲಿ ಒಬ್ಬರೇ ಕುಳಿತಿದ್ರೆ ಫೈನ್‌ ಎಂದು ಹೇಳಲಾಗಿತ್ತು. ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್‌ ಉತ್ತರ ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಉಪ ಮುಖ್ಯಮಂತ್ರಿಗಳು, ಇದೆಲ್ಲ ಸುಳ್ಳು ಸುದ್ದಿ. ರಾಜ್ಯ ಸರ್ಕಾರದ ಎದುರು ಆ ರೀತಿ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ದಂಡದ ವಿಚಾರವಾಗಿ ಕೇಳಿಬಂದಿದ್ದ ಊಹಾಪೋಹಗಳಿಗೆ ಡಿಸಿಎಂ ತೆರೆ ಎಳೆದಿದ್ದಾರೆ.

error: Content is protected !!