Monday, September 8, 2025

ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ್ರಾ ರಶ್ಮಿಕಾ ಮಂದಣ್ಣ? ವೈರಲ್ ಆಯ್ತು ಉಂಗುರದ ಫೋಟೋ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಸಿನಿಮಾ ಹಾಗೂ ಬಾಲಿವುಡ್‌ನಲ್ಲಿ ಹೆಸರು ಮಾಡಿರುವ ನಟಿ ರಶ್ಮಿಕಾ ಮಂದಣ್ಣ ಯಾವಾಗಲೂ ಚರ್ಚೆಯಲ್ಲಿರುವವರು. ಇತ್ತೀಚೆಗೆ ಅವರು ತಮ್ಮ ಖಾಸಗಿ ಜೀವನದ ಕಾರಣದಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಹೊಸ ಫೋಟೋಗಳಲ್ಲಿ, ರಶ್ಮಿಕಾ ತಮ್ಮ ಬೆರಳಿನಲ್ಲಿದ್ದ ಉಂಗುರವನ್ನು ತೋರಿಸುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ. ಇದರಿಂದಾಗಿ ಅವರು ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿರಬಹುದೇ ಎಂಬ ಪ್ರಶ್ನೆಗಳು ಎಲ್ಲೆಡೆ ಕೇಳಿಬರುತ್ತಿವೆ.

ಸೈಮಾ (SIIMA 2025) ಅವಾರ್ಡ್ ಶೋ ನಲ್ಲಿ ಭಾಗವಹಿಸಲು ದುಬೈ ವಿಮಾನ ನಿಲ್ದಾಣಕ್ಕೆ ಬಂದಾಗ ಕ್ಲಿಕ್ ಆದ ಫೋಟೋಗಳಲ್ಲಿ ಬಿಳಿ ಟಿ-ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿದ್ದ ರಶ್ಮಿಕಾ ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅವರ ಕೈಯಲ್ಲಿದ್ದ ಉಂಗುರವೇ ಎಲ್ಲರ ಗಮನ ಸೆಳೆಯಿತು. ಅಭಿಮಾನಿಗಳು ನಟ ವಿಜಯ್ ದೇವರಕೊಂಡ ಅವರ ಹೆಸರನ್ನೂ ಈ ನಡುವೆ ಎತ್ತಿಕೊಂಡಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹಗಳು ನಡೆಯುತ್ತಿವೆ.

ಕಳೆದ ಕೆಲವು ವರ್ಷಗಳಿಂದ ರಶ್ಮಿಕಾ ಮತ್ತು ವಿಜಯ್ ಒಟ್ಟಿಗೆ ಡೇಟಿಂಗ್ ಮಾಡುತ್ತಿರುವ ಸುದ್ದಿ ಕೇಳಿಬರುತ್ತಿದ್ದರೂ, ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಏನೂ ಹೇಳಿರಲಿಲ್ಲ. ಪ್ರಸ್ತುತ ಈ ನಿಶ್ಚಿತಾರ್ಥದ ಸುದ್ದಿಯ ಬಗ್ಗೆ ಸಹ ಅಧಿಕೃತ ದೃಢೀಕರಣ ಬಂದಿಲ್ಲ.

ಇದನ್ನೂ ಓದಿ