Wednesday, September 10, 2025

Kitchen Tips | ನೀವು ಬಳಸೋ ಗೋಧಿಹಿಟ್ಟು ನಕಲಿನಾ ಅಥವಾ ಅಸಲಿನಾ? ಕಂಡುಹಿಡಿಯೋದು ಹೇಗೆ?

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಆಹಾರ ಸಾಮಗ್ರಿಗಳಲ್ಲಿ ನಕಲಿ ವಸ್ತುಗಳು ಹೆಚ್ಚಾಗಿವೆ. ವಿಶೇಷವಾಗಿ ಗೋಧಿಹಿಟ್ಟು, ಉಪ್ಪು, ಬೇಳೆಕಾಳು ಮುಂತಾದವುಗಳಲ್ಲಿ ಕಲಬೆರಕೆ ಹೆಚ್ಚಾಗಿದ್ದು, ಗ್ರಾಹಕರು ಶುದ್ಧ ಮತ್ತು ನಕಲಿ ಹಿಟ್ಟನ್ನು ಗುರುತಿಸೋಕೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಡುಗೆ ಮತ್ತು ಆರೋಗ್ಯವನ್ನು ಕಾಪಾಡಲು ಗೋಧಿಹಿಟ್ಟಿನ ಶುದ್ಧತೆಯನ್ನು ಪರೀಕ್ಷಿಸುವುದು ಅತ್ಯಂತ ಮುಖ್ಯ.

ಹಿಟ್ಟು ಶುದ್ಧತೆಯನ್ನು ಪರೀಕ್ಷಿಸಲು ಲೋಟ ನೀರನ್ನು ತೆಗೆದು, ಅದರಲ್ಲಿ ಅರ್ಧ ಚಮಚ ಗೋಧಿಹಿಟ್ಟನ್ನು ಹಾಕಿ 10–20 ಸೆಕೆಂಡುಗಳ ಕಾಲ ಇಡಿ. ಹಿಟ್ಟು ನೀರಿನಲ್ಲಿ ತೇಲಿದರೆ ಅದು ನಕಲಿ ಎಂದು ತಿಳಿಯಬಹುದು. ಹಿಟ್ಟು ಮುಳುಗಿದರೆ ಶುದ್ಧವಾಗಿದೆ ಎಂದರ್ಥ.

ಹಿಟ್ಟನ್ನು ನಾಡುವಾಗ ಮೃದುವಾಗಿದ್ದರೆ ಶುದ್ಧವಾಗಿದೆ; ಆದರೆ ಬೇಗ ಮೆತ್ತಗಾಗದ ಹಿಟ್ಟು ನಕಲಿ ಅಥವಾ ಕಲಬೆರಕೆ ಆಗಿದೆ.

ನಕಲಿ ಹಿಟ್ಟಿಗೆ ಹೆಚ್ಚಿನ ನೀರು ಬೇಕಾಗುತ್ತದೆ ಮತ್ತು ಅದರಿಂದ ತಯಾರಾದ ಚಪಾತಿ ತಿನ್ನಲು ರುಚಿಯಾಗುವುದಿಲ್ಲ.

ನಿಂಬೆ ರಸ ಬಳಸಿ ಸಹ ಹಿಟ್ಟಿನ ಶುದ್ಧತೆ ಪರೀಕ್ಷಿಸಬಹುದು. ಅರ್ಧ ಚಮಚ ಹಿಟ್ಟಿಗೆ ನಿಂಬೆ ರಸ ಹಾಕಿದಾಗ ಗುಳ್ಳೆಗಳು ಹೊರಬಂದರೆ, ಗೋಧಿಹಿಟ್ಟು ನಕಲಿ ಎಂದು ಗುರುತಿಸಬಹುದು.

ಒಟ್ಟಾರೆ, ಮಾರುಕಟ್ಟೆಯಲ್ಲಿ ಸಿಗುವ ಗೋಧಿಹಿಟ್ಟಿನ ಗುಣಮಟ್ಟವನ್ನು ತಿಳಿದುಕೊಳ್ಳಲು ಈ ವಿಧಾನಗಳು ಸಹಾಯಕ. ಶುದ್ಧ ಹಿಟ್ಟು ಆಯ್ಕೆಮಾಡುವುದು ಆರೋಗ್ಯಕರ ಆಹಾರಕ್ಕೆ, ಚಪಾತಿ ರುಚಿಗೆ ಮತ್ತು ಪೌಷ್ಟಿಕತೆಯನ್ನು ಕಾಪಾಡಲು ಮುಖ್ಯ.

ಇದನ್ನೂ ಓದಿ