ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡು ದನಗಳ ಹಿಂದೆಯಷ್ಟೇ ದುರಸ್ತಿ ಮಾಡಲ್ಪಟ್ಟಿದ್ದ ಚನ್ನಸಂದ್ರ ರಸ್ತೆಯು ಈಗಾಗಲೇ ಮತ್ತೆ ಹದಗೆಟ್ಟಿದೆ. ಬೆಂಗಳೂರಿನ ರಸ್ತೆ ದುರಸ್ತಿಯು ಹೀನಾಯವಾಗಿ ಸೋಲು ಕಂಡಿದೆ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಈ ಹೇಳಿಕೆಗೆ ಪುಷ್ಟಿ ನೀಡುವಂತೆ ಚನ್ನಸಂದ್ರ ರಸ್ತೆಯ ಒಂದು ವೀಡಿಯೋ ಈಗ ವೈರಲ್ ಆಗುತ್ತಿದೆ.
ಚನ್ನಸಂದ್ರ ಸರ್ಕಲ್ ಬಳಿಯ ರಸ್ತೆಯನ್ನು ಸೆಪ್ಟೆಂಬರ್ 27 ರಂದು ದುರಸ್ತಿ ಮಾಡಲಾಗಿತ್ತು ಆದರೆ ಕೇವಲ 48 ಗಂಟೆಗಳಲ್ಲಿಯೇ ಸರಿಪಡಿಸಿದ ಈ ರಸ್ತೆ ಕುಸಿದಿರುವುದು ಕಂಡುಬಂದಿದೆ. ಈ ದೃಶ್ಯಗಳನ್ನು ಬೆಂಗಳೂರಿನ ವ್ಯಕ್ತಿಯೊಬ್ಬರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಈ ವೀಡಿಯೋದಲ್ಲಿ ತೇಪೆ ಹಾಕಿದ ರಸ್ತೆ ಮೇಲ್ಮೈ ಕುಸಿಯುತ್ತಿರುವುದನ್ನು ತೋರಿಸಲಾಗಿದೆ. ನೀರು ಸಂಗ್ರಹವಾಗುವುದು ಮತ್ತು ಸೋರಿಕೆಯಾಗುತ್ತಿರುವುದು ಇಲ್ಲಿ ಗೋಚರಿಸುತ್ತಿದೆ. ಈ ತೇಪೆ ಕೆಲಸವು ಒಂದು ಮಳೆಯ ಅವಧಿಗೂ ಉಳಿಯುವುದಿಲ್ಲ ಎಂದು ಆರೋಪಿಸಿರುವ ನಿವಾಸಿಯು ತಮ್ಮ ಪೋಸ್ಟ್‌ನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ಟ್ಯಾಗ್ ಮಾಡಿದ್ದಾರೆ.
ಬೆಂಗಳೂರು ಕಥೆ ಇಷ್ಟೇನಾ? ದುರಸ್ತಿ ಮಾಡಿ ಎರಡೇ ದಿನಕ್ಕೆ ಮತ್ತೆ ಗುಂಡಿಬಿದ್ದ ರಸ್ತೆಗಳು!
