ಸಾಮಾನ್ಯವಾಗಿ ಮೈ ಕೈ ತುರಿಕೆ ಕಂಡುಬಂದಾಗ ನಾವು ಅದನ್ನು ಚರ್ಮದ ಅಲರ್ಜಿ ಅಥವಾ ಸೋಂಕು ಎಂದು ಭಾವಿಸಿ ನಿರ್ಲಕ್ಷಿಸುತ್ತೇವೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ನಿರಂತರವಾಗಿ ಕಾಡುವ ತುರಿಕೆ ದೇಹದಲ್ಲಿನ ವಿಟಮಿನ್ ಮತ್ತು ಖನಿಜಾಂಶಗಳ ಕೊರತೆಯ ಸಂಕೇತವಾಗಿರಬಹುದು. ಯಾವೆಲ್ಲಾ ಪೋಷಕಾಂಶಗಳ ಕೊರತೆಯಿಂದ ಈ ಸಮಸ್ಯೆ ಕಾಡುತ್ತದೆ ಎಂಬ ಮಾಹಿತಿ ಇಲ್ಲಿದೆ:
- ವಿಟಮಿನ್ ‘ಎ’
ವಿಟಮಿನ್ ‘ಎ’ ಚರ್ಮದ ಆರೋಗ್ಯಕ್ಕೆ ಅತ್ಯಗತ್ಯ. ಇದರ ಕೊರತೆಯುಂಟಾದಾಗ ಚರ್ಮವು ತೇವಾಂಶವನ್ನು ಕಳೆದುಕೊಂಡು ಅತಿಯಾಗಿ ಒಣಗುತ್ತದೆ. ಪರಿಣಾಮವಾಗಿ, ವಿಶೇಷವಾಗಿ ಚಳಿಗಾಲದಲ್ಲಿ ತೀವ್ರವಾದ ತುರಿಕೆ ಕಾಣಿಸಿಕೊಳ್ಳುತ್ತದೆ. - ವಿಟಮಿನ್ ‘ಬಿ’ ಸಂಕೀರ್ಣ
ವಿಟಮಿನ್ ಬಿ12: ಇದರ ಕೊರತೆಯು ನರಗಳ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ಕೈ ಮತ್ತು ಕಾಲುಗಳಲ್ಲಿ ಚುಚ್ಚಿದಂತಾಗುವುದು ಹಾಗೂ ತುರಿಕೆ ಉಂಟಾಗಬಹುದು.
ವಿಟಮಿನ್ ಬಿ3 (ನಿಯಾಸಿನ್): ಇದರ ಕೊರತೆಯು ಚರ್ಮದ ಕಿರಿಕಿರಿ ಮತ್ತು ಉರಿಯೂತಕ್ಕೆ ದಾರಿ ಮಾಡಿಕೊಡುತ್ತದೆ.
- ಕ್ಯಾಲ್ಸಿಯಂ
ಕ್ಯಾಲ್ಸಿಯಂ ಕೇವಲ ಮೂಳೆಗಳಿಗೆ ಮಾತ್ರವಲ್ಲ, ನರಮಂಡಲದ ಕಾರ್ಯಕ್ಷಮತೆಗೂ ಬೇಕು. ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾದಾಗ ನರಗಳು ಅತಿಯಾದ ಸಂವೇದನೆಗೆ ಒಳಗಾಗುತ್ತವೆ. ಇದರಿಂದ ಚರ್ಮದ ಮೇಲೆ ತುರಿಕೆ, ಬಾಯಿ ಅಥವಾ ಬೆರಳುಗಳ ಸುತ್ತ ನಡುಕ ಅಥವಾ ಜುಮುಗುಟ್ಟುವಿಕೆ ಕಂಡುಬರುತ್ತದೆ. - ವಿಟಮಿನ್ ‘ಇ’ ಮತ್ತು ‘ಸಿ’
ವಿಟಮಿನ್ ಇ: ಇದು ನೈಸರ್ಗಿಕವಾಗಿ ಉರಿಯೂತ ನಿರೋಧಕ ಗುಣವನ್ನು ಹೊಂದಿದೆ. ಇದರ ಕೊರತೆಯಿಂದ ಚರ್ಮದ ರಕ್ಷಣಾ ಪದರವು ದುರ್ಬಲಗೊಂಡು ತುರಿಕೆ ಹೆಚ್ಚಾಗುತ್ತದೆ.
ವಿಟಮಿನ್ ಸಿ: ಇದು ಚರ್ಮದಲ್ಲಿ ಕಾಲಜನ್ ಉತ್ಪಾದನೆಗೆ ಸಹಕಾರಿ. ಇದರ ಕೊರತೆಯು ಚರ್ಮದ ಅರೋಗ್ಯವನ್ನು ಹದಗೆಡಿಸಿ ತುರಿಕೆಗೆ ಕಾರಣವಾಗಬಹುದು.

