Saturday, August 30, 2025

ಡಿಕೆಶಿ ಅವರನ್ನು ಐಸೋಲೇಶನ್ ಮಾಡಿರೋದು ಸುಳ್ಳು: ಗೃಹ ಸಚಿವ ಜಿ. ಪರಮೇಶ್ವರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಪಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜಕಾರಣಕ್ಕೆ ಹೊಸಬರಲ್ಲ, ಅವರಿಗೆ ಎಲ್ಲ ರೀತಿಯ ರಾಜಕೀಯ ಜ್ಞಾನವಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಹಾರದಲ್ಲಿ ರಾಹುಲ್ ಗಾಂಧಿ ಯಾತ್ರೆಯಲ್ಲಿ ಮುಖ್ಯಮಂತ್ರಿ ಹಾಗೂ ಇತರರು ಪಾಲ್ಗೊಂಡಿದ್ದರು. ಈ ವೇಳೆ, ಡಿಕೆಶಿ ಅವರನ್ನು ಬಿಟ್ಟು ಸಿಎಂ ತಂಡ ತೆರಳಿದೆ ಎಂಬ ವಿರೋಧ ಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, “ಡಿಕೆಶಿ ನಮ್ಮ ಪಕ್ಷದ ರಾಜ್ಯಾಧ್ಯಕ್ಷರು. ಅವರ ಸ್ಥಾನಮಾನ ಉಪಮುಖ್ಯಮಂತ್ರಿಗಿಂತಲೂ ಹೆಚ್ಚಾಗಿದೆ. ಪಕ್ಷದ ಕಾರ್ಯದಲ್ಲಿ ಅವರಿಗೆ ಸದಾ ಗೌರವ ಹಾಗೂ ಘನತೆ ಇರುತ್ತದೆ” ಎಂದು ಹೇಳಿದರು.

ಅವರು ಮುಂದುವರಿದು, ಡಿಕೆಶಿ ರಾಜಕೀಯದಲ್ಲಿ ಅನುಭವಿಗಳಾದ ನಾಯಕರು, ಎಲ್ಲಾ ರೀತಿಯ ವಿಷಯಗಳಲ್ಲೂ ಅವರಿಗೆ ಜ್ಞಾನವಿದೆ. ಅವರನ್ನು ಐಸೋಲೇಶನ್ ಮಾಡಲಾಗಿದೆ ಎಂಬ ಮಾತುಗಳು ನಿಜವಲ್ಲ. ಇಂತಹ ಅಸತ್ಯ ಪ್ರಚಾರದಿಂದ ಯಾವುದೇ ಅರ್ಥವಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಪಕ್ಷದ ನಾಯಕ ಆರ್. ಅಶೋಕ್ ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯಿಸಲು ತಾನು ಬಯಸುವುದಿಲ್ಲ ಎಂದೂ ಪರಮೇಶ್ವರ್ ಹೇಳಿದರು.

ಇದನ್ನೂ ಓದಿ