Tuesday, October 21, 2025

ತಿಂಡಿ ತಿನ್ನಲು ಒಂದೂವರೆ ಗಂಟೆ ಬೇಕಿತ್ತು… ಸಲ್ಲು ಬಾಯ್ ಗೆ ಅಂತದ್ದು ಏನಾಯ್ತು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್​ ನಟ ಸಲ್ಮಾನ್ ಖಾನ್ ಅವರುವಿಚಿತ್ರ ಕಾಯಿಲೆ ಇರೋ ಬಗ್ಗೆ ಹೇಳಿಕೊಂಡಿದ್ದಾರೆ. ಆ ಸಮಯ ತಿಂಡಿ ತಿನ್ನಲೂ ನನಗೆ ಗಂಟೆಗಳ ಅವಧಿ ಬೇಕಿತ್ತು, ಆತ್ಮಹತ್ಯೆ ಯೋಚನೆಗಳು ಬಂದಿದ್ದವು ಎಂದು ಸಲ್ಲು ಬಾಯ್ ಜೀವನದಲ್ಲಿ ಅನುಭವಿಸಿದ ನರರೋಗದ ನರಕಯಾತನೆ ಕುರಿತು ಹೇಳಿದ್ದಾರೆ.

`ಟು ಮಚ್’ ಎಂಬ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಟ್ರೈಜಿಮಿನಲ್ ನ್ಯೂರಾಲ್ಜಿಯಾ ಎಂಬ ಸಮಸ್ಯೆ ಇತ್ತಂತೆ. ಈ ಬಗ್ಗೆ ಅವರಿಗೆ ಲಾರಾ ದತ್ತ ಜೊತೆ ‘ಪಾರ್ಟ್ನರ್’ ಸಿನಿಮಾ ಶೂಟ್ ಮಾಡುವಾಗ ತಿಳಿಯಿತು. ಲಾರಾ ಅವರು ಸಲ್ಲು ಗಲ್ಲದಿಂದ ಒಂದು ಕೂದಲನ್ನು ಕಿತ್ತರಂತೆ. ಆಗ ಈ ಬಗ್ಗೆ ಗೊತ್ತಾಯಿತು ಎಂದು ಹೇಳಿದ್ದಾರೆ.

‘ಬೈಪಾಸ್ ಶಸ್ತ್ರಚಿಕಿತ್ಸೆಗಳು, ಹೃದಯ ಕಾಯಿಲೆಗಳು ಮತ್ತು ಇನ್ನೂ ಅನೇಕ ಸಮಸ್ಯೆಗಳಿಂದ ಬಳಲುತ್ತಿರುವ ಬಹಳಷ್ಟು ಜನರಿದ್ದಾರೆ. ನನಗೆ ಟ್ರೈಜಿಮಿನಲ್ ನರಶೂಲೆ ಇತ್ತು. ಶತ್ರುವಿಗೂ ಆ ನೋವು ಇರಬೇಕೆಂದು ನೀವು ಬಯಸುವುದಿಲ್ಲ. ನನಗೆ ಏಳೂವರೆ ವರ್ಷಗಳ ಕಾಲ ಅದು ಇತ್ತು. ಪ್ರತಿ 4-5 ನಿಮಿಷಗಳಿಗೊಮ್ಮೆ ಅದು ನೋವುಂಟು ಮಾಡುತ್ತಿತ್ತು’ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

‘ಮಾತನಾಡುವಾಗ ಇದ್ದಕ್ಕಿದ್ದಂತೆ ಆ ನೋವು ಬರುತ್ತಿತ್ತು. ಬೆಳಗ್ಗಿನ ತಿಂಡಿ ಸೇವಿಸಲು ಸುಮಾರು ಒಂದೂವರೆ ಗಂಟೆ ತೆಗೆದುಕೊಳ್ಳುತ್ತಿತ್ತು. ಹೀಗಾಗಿ ನಾನು ನೇರವಾಗಿ ಊಟಕ್ಕೆ ಹೋಗುತ್ತಿದ್ದೆ. ಆಮ್ಲೆಟ್​ನ ಅಗೆದು ತಿನ್ನಲು ಸಾಧ್ಯವಾಗದ ಕಾರಣ, ನಾನು ಬಲವಂತದಿಂದ ತಿನ್ನಬೇಕಿತ್ತು’ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

‘ನಾನು ಪಾರ್ಟ್ನರ್ ಸಿನಿಮಾ ಮಾಡುತ್ತಿದ್ದೆ. ಲಾರಾ ಕೂಡ ಇದ್ದರು. ಅವರು ನನ್ನ ಮುಖದಿಂದ ಕೂದಲು ಕಿತ್ತರು. ನನಗೆ ಅತೀವ ನೋವಾಯಿತು. ನಾನು ಆಗ ಜೋಕ್ ಆಗಿ ತೆಗೆದುಕೊಂಡಿದ್ದೆ’ ಎಂದು ಅವರು ಹೇಳಿದ್ದಾರೆ.

ಟ್ರೈಜಿಮಿನಲ್ ನ್ಯೂರಾಲ್ಜಿಯಾ ಎಂದರೆ ಮುಖದ ಒಂದು ಬದಿಯಲ್ಲಿ ಹಠಾತ್, ತೀಕ್ಷ್ಣವಾದ, ವಿದ್ಯುತ್ ಆಘಾತದಂತಹ ನೋವು ಕಾಣಿಸಿಕೊಳ್ಳುವುದು. ಹಲ್ಲುಜ್ಜುವಾಗ, ಮಾತನಾಡುವುದು ನೋವು ಹೆಚ್ಚಬಹುದು. ಟ್ರೈಜಿಮಿನಲ್ ನರವನ್ನು ಒಂದು ರಕ್ತನಾಳವು ಸಂಕುಚಿತಗೊಳಿಸುವುದರಿಂದ ಸಂಭವಿಸುತ್ತದೆ ಎಂದು ವೈದ್ಯ ಲೋಕ ಹೇಳುತ್ತದೆ. ಟ್ರೈಜಿಮಿನಲ್ ನ್ಯೂರಾಲ್ಜಿಯಾ ಒಂದು ದೀರ್ಘಕಾಲದ ಸಮಸ್ಯೆ ಆಗಿದ್ದು, ಇದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ, ನೋವನ್ನು ಕಡಿಮೆ ಮಾಡಲು ಮತ್ತು ನಿಯಂತ್ರಿಸಲು ಹಲವಾರು ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಆಯ್ಕೆಗಳು ಲಭ್ಯವಿವೆ.

error: Content is protected !!