Wednesday, October 22, 2025

ಬೇರೆಯವರ ಮನೆಬಾಗಿಲಿಗೆ ಹೋಗಿ ಗಂಟೆಗಟ್ಲೆ ಕೂರೋದಾಗಿದೆ ಶಿಕ್ಷಕರ ಪಾಡು: ರವಿಕುಮಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವಿಳಂಬ ಆಗುತ್ತಿದ್ದು, ಸರ್ಕಾರದ ಸಮಸ್ಯೆ ಪರಿಹಾರ ಆಗುತ್ತಿಲ್ಲ. ಈ ಸಮೀಕ್ಷೆ ಶಿಕ್ಷಕರಿಗೆ ಶಿಕ್ಷೆ ಕೊಡುವ ಸಮೀಕ್ಷೆ ಆಗಿದೆ ಎಂದು ಬಿಜೆಪಿ ಎಂಎಲ್‌ಸಿ ರವಿಕುಮಾರ್ ಸರ್ಕಾರದ ವಿರುದ್ಧ ಕಿಡಿಕಾರಿದರು.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಸಮೀಕ್ಷೆಯಲ್ಲಿ ಹೆಚ್ಚು ಸಮಸ್ಯೆ ಆಗುತ್ತಿದೆ. UHID ನಂಬರ್ ಸಮಸ್ಯೆ ಆಗುತ್ತಿದೆ. ಅಡ್ರೆಸ್ ಇಲ್ಲದೆ ಸಮಸ್ಯೆ ಆತಗುತ್ತಿದೆ. UHID ನಂಬರ್ ಸರಿಯಾಗಿ ಮನೆ ತೋರಿಸುತ್ತಿಲ್ಲ. ಸರ್ವೆ ಮಾಡಲು ಹೋಗಿರೋ ಶಿಕ್ಷಕರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದರು.

15 ದಿನ ಅಲ್ಲ ಒಂದೂವರೆ ತಿಂಗಳು ಆದರೂ ಸರ್ವೆ ಮುಗಿಯಲ್ಲ. ಸರ್ಕಾರ ಯಾವುದೇ ತರಬೇತಿ ಸರಿಯಾಗಿ ಕೊಟ್ಟಿಲ್ಲ. ಸರ್ಕಾರ ಸರ್ವೆ ಮಾಡುವುದರಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಈ ಸರ್ವೆ ಶಿಕ್ಷಕರಿಗೆ ಶಿಕ್ಷೆ ಕೊಡುತ್ತಿದೆ. ಸಿಎಂ, ಸರ್ಕಾರ ಸಮಯ ತೆಗೆದುಕೊಂಡು ಸರ್ವೆ ಮಾಡಲಿ ಎಂದು ವಾಗ್ದಾಳಿ ನಡೆಸಿದರು. 

error: Content is protected !!