Friday, September 5, 2025

CINE | ಕೊನೆಗೂ OTTಗೆ ಬಂದೇಬಿಡ್ತು ‘ಜೈಲರ್’: ಯಾವಾಗ? ಎಲ್ಲಿ ಸ್ಟ್ರೀಮಿಂಗ್ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಗಸ್ಟ್ 10 ರಂದು ವಿಶ್ವಾದ್ಯಂತ ಬಿಡುಗಡೆಯಾದ ರಜನಿಕಾಂತ್ ಅಭಿನಯದ “ಜೈಲರ್” ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಸೆಳೆದ ಈ ಆಕ್ಷನ್‌ ಥ್ರಿಲ್ಲರ್‌ ಈಗ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರೇಕ್ಷಕರನ್ನು ಮನರಂಜಿಸಲು ಸಜ್ಜಾಗಿದೆ. ಸೆಪ್ಟೆಂಬರ್ 11 ರಿಂದ ಚಿತ್ರವು ಪ್ರೈಮ್ ವಿಡಿಯೋದಲ್ಲಿ ಲಭ್ಯವಾಗಲಿದೆ.

ಅಮೆಜಾನ್ ಪ್ರೈಮ್ ವಿಡಿಯೋ ಜೈಲರ್ ಚಿತ್ರದ ಜಾಗತಿಕ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದ್ದು, ಸೆಪ್ಟೆಂಬರ್ 11ರಿಂದ ಸಿನಿಮಾ OTT ಯಲ್ಲಿ ಲಭ್ಯವಾಗಲಿದೆ. ತಮಿಳು ಭಾಷೆಯೊಂದಿಗೆ ತೆಲುಗು, ಮಲಯಾಳಂ ಮತ್ತು ಕನ್ನಡ ಡಬ್ ಆವೃತ್ತಿಗಳೂ ಬಿಡುಗಡೆ ಆಗಲಿದ್ದು, ಭಾರತ ಸೇರಿದಂತೆ 240ಕ್ಕೂ ಹೆಚ್ಚು ದೇಶಗಳಲ್ಲಿ ಪ್ರೇಕ್ಷಕರು ನೋಡಬಹುದಾಗಿದೆ.

“ಜೈಲರ್” ಚಿತ್ರವನ್ನು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸಿದ್ದು, ಶಿವರಾಜ್‌ಕುಮಾರ್, ಮೋಹನ್‌ಲಾಲ್, ಜಾಕಿ ಶ್ರಾಫ್, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್, ವಿನಾಯಕನ್ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅನಿರುದ್ಧ್ ಅವರ ಸಂಗೀತ ಚಿತ್ರಕ್ಕೆ ಹೆಚ್ಚುವರಿ ಆಕರ್ಷಣೆ ನೀಡಿದೆ.

ಬಾಕ್ಸ್ ಆಫೀಸ್ ಗಳಿಕೆ
ಚಿತ್ರ ಬಿಡುಗಡೆಯಾಗಿ 21 ದಿನಗಳು ಪೂರ್ಣಗೊಂಡಿವೆ. ಮೊದಲ ದಿನ 65 ಕೋಟಿ, ಎರಡನೇ ದಿನ 54.75 ಕೋಟಿ ಮತ್ತು ಮೂರನೇ ದಿನ 39.5 ಕೋಟಿ ಗಳಿಕೆ ದಾಖಲಿಸಿದೆ. ಮೊದಲ ವಾರಾಂತ್ಯದಲ್ಲಿ 229.65 ಕೋಟಿ ಗಳಿಸಿದ ಚಿತ್ರ, ಎರಡನೇ ವಾರದಲ್ಲಿ 41.85 ಕೋಟಿ ಗಳಿಸಿತು. 20ನೇ ದಿನ 1.3 ಕೋಟಿ ಮತ್ತು 21ನೇ ದಿನ 1.01 ಕೋಟಿ ಗಳಿಕೆಯೊಂದಿಗೆ, ಭಾರತದಲ್ಲಿ ಒಟ್ಟು 282.94 ಕೋಟಿ ಮತ್ತು ವಿಶ್ವಾದ್ಯಂತ 507 ಕೋಟಿ ಗಳಿಸಿದೆ. ಚಿತ್ರದ ಬಜೆಟ್ 400 ಕೋಟಿ ರೂಪಾಯಿ ಆಗಿದ್ದು, ಇದು ಈ ವರ್ಷದ ಮೂರನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ.

“ಜೈಲರ್” ಚಿತ್ರವು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ನೀಡಿದ ನಂತರ ಒಟಿಟಿ ಪ್ರೇಕ್ಷಕರಿಗೂ ತಲುಪಲು ಸಜ್ಜಾಗಿದೆ. ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರವು ಈಗಾಗಲೇ ಭರ್ಜರಿ ಯಶಸ್ಸು ಸಾಧಿಸಿರುವುದರಿಂದ ಡಿಜಿಟಲ್ ವೀಕ್ಷಕರಿಂದಲೂ ಅದೇ ರೀತಿ ಮೆಚ್ಚುಗೆ ಪಡೆಯುವ ನಿರೀಕ್ಷೆಯಿದೆ.

ಇದನ್ನೂ ಓದಿ