ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿಯ ಸುಲೇಗಾಳಿ ಮೀಸಲು ಅರಣ್ಯ ಪ್ರದೇಶದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಜೊಡಾನೆಗಳು ಸಾವನ್ನಪ್ಪಿದ ಘಟನೆ ನಡೆದಿದೆ.
ಖಾನಾಪುರ ತಾಲೂಕಿನ ಕಡೆಯ ಹಳ್ಳಿಯ ಸುಲೇಗಾಳಿ ಸುರಕ್ಷಿತ ಅರಣ್ಯ ಪ್ರದೇಶದಲ್ಲಿ ಆನೆಗಳ ಹಿಂಡಿನಿಂದ ಬಂದ ಸರಿಸುಮಾರು ನಾಲ್ಕು ವರ್ಷಗಳ ವಯಸ್ಸಿನ ಒಂದು ಗಂಡು, ಒಂದು ಹೆಣ್ಣು ಆನೆ ಮೃತಪಟ್ಟಿವೆ.
ಘಟನೆ ತಿಳಿಯುತ್ತಿದ್ದಂತೆ ನಾಗರಗಾಳಿ ವಲಯದ ಆರ್‌ಎಫ್‌ಓ ಸಚೀನ ಹೊನಮನಿ, ಡಿಎಫ್‌ಓ ಕ್ರಾಂತಿ ಅಧಿಕಾರಿಗಳ ತಂಡದಿಂದ ಸ್ಥಳ ಪರೀಶಿಲನೆ ನಡೆಸಲಾಗಿದೆ. ಮೃಗಾಲಯ ವೈದ್ಯ ನಾಗೇಶ ಹುಯಿಲಗೋಳ ಮರಣೋತ್ತರ ಪರಿಕ್ಷೆ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ನಾಗರಗಾಳಿ ಸುರಕ್ಷಿತ ಅರಣ್ಯಪ್ರದೇಶದ ಸುಲೇಗಾಳಿ ಗ್ರಾಮದ ಹೊರವಲಯದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಜೋಡಾನೆಗಳಿ ಪ್ರಾಣ ಕಳದುಕೊಂಡಿವೆ. ರೈತ ಗಣಪತಿ ಗುರವ ತೋಟದಲ್ಲಿ ಹಾಕಿದ ವಿದ್ಯುತ್ ತಂತಿ ಬೇಲಿ ಸ್ಪರ್ಶಿಸಿದ ಆನೆಗಳು ಸ್ಥಳದಲ್ಲಿಯೇ ಮೃತಪಟ್ಟಿವೆ.
ಆನೆಗಳ ಸಾವಿನ ವಿಷಯ ತಿಳಿಯುತ್ತಿದ್ದಂತೆ ರೈತ ಶಿವಾಜಿ ಗುರವ ತಲೆಮರೆಸಿಕೊಂಡಿದ್ದಾರೆ. ಇನ್ನೊರ್ವ ರೈತ ಗಣಪತಿ ಗುರವನನ್ನು ವನ್ಯಜೀವಿ ಸುರಕ್ಷತಾ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ. ಈ ಪ್ರಕರಣ ಕುರಿತು ತನಿಖೆ ಆರಂಭಿಸಿದ್ದೇವೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ವರದಿಯನ್ನ ಕೇಳಿದ್ದಾರೆ.
ವಿದ್ಯುತ್ ತಂತಿ ಸ್ಪರ್ಶಿಸಿ ಜೋಡಾನೆ ಸಾವು: ವರದಿ ಕೇಳಿದ ಈಶ್ವರ್ ಖಂಡ್ರೆ

