Thursday, September 11, 2025

ವಿವಿಧ ರಾಜ್ಯಗಳಲ್ಲಿ ನಡೆದ ಜಂಟಿ ಕಾರ್ಯಾಚರಣೆ: ಐವರು ಶಂಕಿತ ಐಸಿಸ್‌ ಉಗ್ರರ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿವಿಧ ರಾಜ್ಯಗಳಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಪೊಲೀಸರು ಕೆಮಿಕಲ್‌ ವೆಪೆನ್‌ ತಯಾರಿಸುತ್ತಿದ್ದ ಹಾಗೂ ಮುಸ್ಲಿಂ ಸಂಘಟನೆಗೆ ಯುವಕರನ್ನು ನೇಮಿಸಿಕೊಳ್ಳಲು ʻಖಿಲಾಫತ್‌ʼ ಮಾದರಿ ಅನುಸರಿಸುತ್ತಿದ್ದ ಐವರು ಶಂಕಿತ ಐಸಿಸ್‌ ಉಗ್ರರನ್ನು ಬಂಧಿಸಿದ್ದಾರೆ.

ದೆಹಲಿ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ತೆಲಂಗಾಣದಲ್ಲಿ ಶಂಕಿತ ಉಗ್ರರನ್ನ ಬಂಧಿಸಲಾಗಿದೆ.

ಮುಂಬೈ ನಿವಾಸಿ ಅಫ್ತಾಬ್, ಅಬು ಸುಫಿಯಾನ್‌ ಇಬ್ಬರನ್ನ ದೆಹಲಿಯ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ, ಆಶರ್ ದಾನಿಶ್‌ ರಾಂಚಿಯಲ್ಲಿ, ಕಮ್ರಾನ್ ಖುರೇಷಿಯನ್ನ ಮಧ್ಯಪ್ರದೇಶದ ರಾಜ್‌ಗಢದಲ್ಲಿ ಮತ್ತು ಹುಜೈಫ್ ಯೆಮೆನ್‌ನ ತೆಲಂಗಾಣದಲ್ಲಿ ಬಂಧಿಸಲಾಗಿದೆ.

ಬಂಧಿತ ಐವರು ಉಗ್ರ ಸಂಘಟನೆಯ ಸ್ಲೀಪರ್‌ ಮಾಡ್ಯೂಲ್‌ನ ಭಾಗವಾಗಿದ್ದರು. ಬಾಂಬ್‌ಗಳನ್ನ ತಯಾರಿಸುವುದು, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದು ಹಾಗೂ ಮುಸ್ಲಿಂ ಸಂಘಟನೆಯ ಬಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರನಾಗಿರುವ ಡ್ಯಾನಿಶ್‌ ಈ ಐವರ ಗುಂಪಿನ ನಾಯಕನಾಗಿದ್ದ. ʻಗಜ್ವಾʼ ಎಂಬ ಕೋಡ್‌ ನೊಂದಿಗೆ ಭಾರತದಲ್ಲಿ ಕೆಲಸ ಮಾಡುತ್ತಿದ್ದ. ಈ ವರ್ಷ ಜನವರಿಯಲ್ಲಿ ಭಾರತಕ್ಕೆ ಬಂದಿದ್ದ. ಬಾಂಬ್‌ ತಯಾರಿಸುವುದರಲ್ಲಿ ಎಕ್ಸ್‌ಪರ್ಟ್‌ ಆಗಿದ್ದ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ