Wednesday, November 26, 2025

GOOD NEWS | ನಮ್ಮ ಮೆಟ್ರೋ ನಿಲ್ದಾಣದಲ್ಲಿ ನಾಪತ್ತೆಯಾಗಿದ್ದ ಕಂದಮ್ಮ ತಾಯಿ ಮಡಿಲಿಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಕೆಂಪೇಗೌಡ ಮೆಟ್ರೊ ನಿಲ್ದಾಣದಲ್ಲಿ ತಾಯಿಯಿಂದ ತಪ್ಪಿ ಹೋದ 6 ವರ್ಷದ ಮಗುವನ್ನು ಸುರಕ್ಷಿತವಾಗಿ ಪತ್ತೆ ಮಾಡಿ ತಾಯಿಯ ಮಡಿಲಿಗೆ ಸೇರಿಸಲಾಗಿದೆ.

ನ.1ರಂದು ಮಧ್ಯಾಹ್ನ ಸುಮಾರು 12.30ಕ್ಕೆ ಮೆಜೆಸ್ಟಿಕ್ ನಿಲ್ದಾಣದಲ್ಲಿ 6 ವರ್ಷದ ಹೆಣ್ಣು ಮಗು, ತಾಯಿಯಿಂದ ಬೇರ್ಪಟ್ಟಿದ್ದಳು. ಪ್ರಯಾಣಿಕರೊಬ್ಬರು ಮಗುವನ್ನು ಗುರುತಿಸಿ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿದ್ದರು.

ಸಿಬ್ಬಂದಿ ಮೆಜೆಸ್ಟಿಕ್ ನಿಲ್ದಾಣದಲ್ಲಿಯೇ ಮಗುವನ್ನು ಕೂರಿಸಿ, ಎಲ್ಲಾ ನಿಲ್ದಾಣಗಳ ನಿಯಂತ್ರಕರಿಗೆ ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ನಿಲ್ದಾಣದ ನಿಯಂತ್ರಕರು ತಾಯಿಯನ್ನು ಪತ್ತೆ ಹಚ್ಚಿ, ಮಗುವನ್ನು ಸುರಕ್ಷಿತವಾಗಿ ಒಪ್ಪಿಸಿದ್ದಾರೆ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!