ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಆರ್‌ಎಸ್ ಜಲಾಶಯದಲ್ಲಿ ರೈತರ ವಿರೋಧದ ನಡುವೆಯೂ ಇಂದಿನಿಂದ 5 ದಿನಗಳ ಕಾಲ ನಡೆಯಲಿರುವ ಕಾವೇರಿ ಆರತಿಗೆ ಚಾಲನೆ ಸಿಕ್ಕಿದೆ. ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಬಣ್ಣಬಣ್ಣದ ವಿದ್ಯುತ್ ದೀಪಾಲಂಕಾರದಿಂದ ಕನ್ನಂಬಾಡಿ ಕಟ್ಟೆ ಕಂಗೊಳಿಸುತ್ತಿದ್ದು, ದಸರಾ ನೋಡುಗರಿಗೆ ಕಾವೇರಿ ಆರತಿ ಒಂದು ಆಕರ್ಷಣೆಯಾಗಿದೆ.
ಪ್ರತಿನಿತ್ಯವೂ ಒಂದೊಂದು ಊರಿನವರಿಗೆ ಕಾವೇರಿ ಆರತಿ ಕಣ್ತುಂಬಿಕೊಳ್ಳಲು ಅವಕಾಶ ನೀಡಲಾಗಿದೆ. ಇನ್ನೂ ಐದು ದಿನ ಆರತಿ ನಡೆಯಲಿದೆ. ಕೆಆರ್‌ಎಸ್ ಬೃಂದಾವನಕ್ಕೆ ಬರುವ ಪ್ರವಾಸಿಗರಿಗೆ ಉಚಿತ ಪ್ರವೇಶವಿದೆ.
ಬಣ್ಣಬಣ್ಣದ ವಿದ್ಯುತ್ ದೀಪಾಲಂಕಾರದಿಂದ ಮಿಂಚಿದ ಕನ್ನಂಬಾಡಿ ಕಟ್ಟೆ, ಕಾವೇರಿ ಆರತಿಯೇ ಅಟ್ರಾಕ್ಷನ್
