Friday, October 10, 2025

ಕಾಂತಾರ – 1 ಭರ್ಜರಿ ಸಕ್ಸಸ್: ಮುಂಬೈ ಸಿದ್ಧಿ ವಿನಾಯಕ ದೇಗುಲಕ್ಕೆ ನಟ ರಿಷಬ್‌ ಶೆಟ್ಟಿ ಭೇಟಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಚಾಪ್ಟರ್ 1 ಸಿನಿಮಾ ದೇಶ ವಿದೇಶದಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಸಿನಿಮಾ ಕಂಡು ಪ್ರೇಕ್ಷಕರು ಫಿದಾ ಆಗಿದ್ದಾರೆ.

ಇನ್ನೊಂದೆಡೆ ನಟ ರಿಷಬ್‌ ಶೆಟ್ಟಿ ಅವರು ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ. ಅಕ್ಟೋಬರ್ 10ರಂದು ಮುಂಬೈನ ಸಿದ್ಧಿವಿನಾಯಕ ದೇವ ಸ್ಥಾನಕ್ಕೆ ಇವರು ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಕಾಂತಾರ ಚಾಪ್ಟರ್ 1 ಸಿನಿಮಾ ತೆರೆ ಮೇಲೆ ಬರುತ್ತಿದ್ದಂತೆ ಎಲ್ಲ ಕಡೆ ಹೌಸ್ ಫುಲ್ ಆಗಿದೆ. ಒಂದೆಡೆ ಟಿಕೆಟ್ ಬೆಲೆ ಜಾಸ್ತಿ ಎಂಬ ದೂರು ಅಭಿಮಾನಿಗಳದ್ದಾದರೆ, ಬೆಲೆ ಎಷ್ಟೇ ಆದರೂ ಸಿನಿಮಾ ನೋಡುತ್ತೇವೆ ಎನ್ನುವ ಪ್ರೇಕ್ಷಕ ಬಳಗ ಇನ್ನೊಂದೆಡೆ, ಈ ಸಿನಿಮಾ ಹಾಕಿದ್ದ ಬಂಡವಾಳ ವಾಪಾಸಾಗಿದ್ದು ಚಿತ್ರದ ಯಶಸ್ಸನ್ನು ಆಚರಿಸಲು ನಟ ರಿಷಬ್‌ ಶೆಟ್ಟಿ ಅವರು ಮುಂಬೈನ ಸಿದ್ಧಿವಿನಾಯಕ ದೇವಸ್ಥಾನ ತೆರಳಿದ್ದು ಅಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ‌. ನ

ಮುಂಬೈನಲ್ಲಿಯೂ ನಟ ರಿಷಬ್‌ ಶೆಟ್ಟಿ ಅವರನ್ನು ಅಭಿಮಾನಿಗಳು ಗುರುತಿಸಿದ್ದು ಅವರು ಸಾರ್ವಜನಿಕವಾಗಿ ಕಂಡು ಬರುತ್ತಿದ್ದಂತೆ ಬಹುತೇಕರು ಸೆಲ್ಫಿ ತೆಗೆಸಿಕೊಂಡಿದ್ದಾರೆ. ಅಭಿಮಾನಿಗಳ ಈ ಪ್ರೀತಿಗೆ ರಿಷಬ್‌ ಶೆಟ್ಟಿ ಕೋಪಗೊಳ್ಳದೇ ನಗು ನಗುತ್ತಲೆ ಎಲ್ಲರನ್ನು ಮಾತನಾಡಿಸಿದ್ದಾರೆ.

error: Content is protected !!