Monday, October 13, 2025

ಕಾಂತಾರ ಚಾಪ್ಟರ್ 1 ಅಬ್ಬರ: ಬುಕ್ ಮೈ ಶೋನಲ್ಲಿ ದಾಖಲೆಯ 50,00,000 ಟಿಕೆಟ್ ಸೇಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಚಾಪ್ಟರ್ 1 ಸಿನಿಮಾ ರಿಲೀಸ್ ಆಗಿ ತೆರೆ ಮೇಲೆ ಅಬ್ಬರಿಸುತ್ತಿದ್ದು, ಅಭಿಮಾನಿಗಳು ಇಷ್ಟಪಡುತ್ತಿದ್ದಾರೆ. ಅಷ್ಟೆ ಅಲ್ಲದೆ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಚೆನ್ನಾಗಿ ಕಲೆಕ್ಷನ್ ಮಾಡುತ್ತಿದೆ.

ಇತ್ತ ಸಿನಿಮಾ ಟೆಕೆಟ್ ಬುಕ್ ಮಾಡುವ ಬುಕ್ ಮೈ ಶೋನಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾದ 50 ಲಕ್ಷ ಟಿಕೆಟ್ಸ್ ಸೇಲ್ ಆಗಿದೆ.

ಈ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರ ಮಾತ್ರವಲ್ಲ, ರೇಟಿಂಗ್ ವಿಚಾರದಲ್ಲಿ ಕೂಡಾ ಹಿಂದೆ ಬಿದ್ದಿಲ್ಲ. ಸಿನಿಮಾ ಭರ್ಜರಿಯಾಗಿ ರೇಟಿಂಗ್ ಕೂಡಾ ಪಡೆದುಕೊಂಡಿದೆ.

ಬುಕ್ ಮೈ ಶೋ ಟಿಕೆಟ್ ಬುಕ್ಕಿಂಗ್ ಅಪ್ಲಿಕೇಷನ್ ಆಗಿದ್ದು ಇಲ್ಲಿ ಸಿನಿಮಾಗಳಿಗೆ ರೇಟಿಂಗ್ ಕೊಡುವಂತಹ ಅವಕಾಶವೂ ಇದೆ. ಬುಕ್ ಮೈ ಶೋನಲ್ಲಿ ದಾಖಲೆಯ ಟಿಕೆಟ್ ಮಾರಾಟವಾಗಿದ್ದು ಇಲ್ಲಿ ರೇಟಿಂಗ್ ಕೂಡಾ ಚೆನ್ನಾಗಿಯೇ ಬಂದಿದೆ.

ಬುಕ್ ಮೈ ಶೋನಲ್ಲಿ 10ರಲ್ಲಿ 9.4 ರೇಟಿಂಗ್ ನೀಡಲಾಗಿದೆ. ಇದು ಇತರ ಸಿನಿಮಾಗಳಿಗೆ ಹೋಲಿಸಿದರೆ ಭರ್ಜರಿ ರೇಟಿಂಗ್ ಆಗಿದೆ.

ಕಾಂತಾರ ಚಾಪ್ಟರ್ 1 ಅಕ್ಟೋಬರ್ 2ರಂದು ರಿಲೀಸ್ ಆಗಿದೆ. ಇದು ರಿಲೀಸ್ ಆದ ದಿನವೇ ಬರೋಬ್ಬರಿ 1,280,000 ಮಾರಾಟವಾಗಿದೆ. ಇದು 2025ರಲ್ಲಿ ಬುಕ್​ ಮೈ ಶೋನಲ್ಲಿ ದಾಖಲಾದ ಅತ್ಯಧಿಕ ಟಿಕೆಟ್ ಮಾರಾಟವಾಗಿದೆ.

ಕಾಂತಾರ ಚಾಪ್ಟರ್ 1ನ ಘರ್ಜನೆ ದೇಶಾದ್ಯಂತ ಪ್ರತಿಧ್ವನಿಸುತ್ತಿದೆ, 24 ಗಂಟೆಗಳಲ್ಲಿ 1.28 ಮಿಲಿಯನ್+ ಟಿಕೆಟ್‌ಗಳು ಮಾರಾಟವಾಗಿವೆ! ಈ ಮೂಲಕ ಕಾಂತಾರ ಚಾಪ್ಟರ್ 1 2025 ರಲ್ಲಿ ಬುಕ್ ಮೈ ಶೋನಲ್ಲಿ ಮೊದಲ ದಿನದ ಅತ್ಯಧಿಕ ಮಾರಾಟವನ್ನು ದಾಖಲಿಸಿದ ಸಿನಿಮಾ ಆಗಿ ಹೊರ ಹೊಮ್ಮಿದೆ ಎಂದು ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದ್ದಾರೆ.

error: Content is protected !!