ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಬಹು ನಿರೀಕ್ಷಿತ ಚಿತ್ರ ಕಾಂತಾರ ಚಾಪ್ಟರ್ 1 ರಿಲೀಸ್‌ಗೆ ಮುನ್ನವೇ ಅದ್ಭುತ ಕ್ರೇಜ್ ಸೃಷ್ಟಿಸಿದೆ. ಅಕ್ಟೋಬರ್ 2 ರಂದು ಚಿತ್ರ ಅಧಿಕೃತವಾಗಿ ತೆರೆಕಾಣಲಿದ್ದು, ಕೇವಲ ಕರ್ನಾಟಕದಲ್ಲೇ 350 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 2 ಸಾವಿರಕ್ಕೂ ಹೆಚ್ಚು ಪ್ರದರ್ಶನಗಳು ನಿಗದಿಯಾಗಿವೆ. ಬಿಡುಗಡೆಗೆ ಮುನ್ನದಿನವೇ ಬೆಂಗಳೂರಿನಲ್ಲೇ 100 ಕ್ಕೂ ಹೆಚ್ಚು ಪೇಯ್ಡ್ ಪ್ರೀಮಿಯರ್ ಶೋ ನಡೆಯುತ್ತಿರುವುದು ದಾಖಲೆ ಸೃಷ್ಟಿಸಿದೆ. ಇಷ್ಟೊಂದು ಸಂಖ್ಯೆಯಲ್ಲಿ ಪ್ರೀಮಿಯರ್ ಶೋ ನಡೆದಿರುವುದು ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲು.
ಕಾಂತಾರ ಚಾಪ್ಟರ್ 1 ಕರ್ನಾಟಕದಾದ್ಯಂತ 350 ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿದೆ. ಮೊದಲ ದಿನವೇ 2 ಸಾವಿರಕ್ಕೂ ಹೆಚ್ಚು ಶೋಗಳು ನಡೆಯಲಿದ್ದು, ಚಿತ್ರಮಂದಿರಗಳಲ್ಲಿ ಭಾರಿ ಸಂಭ್ರಮ ಕಂಡುಬರುತ್ತಿದೆ.
ಕೇವಲ ಕರ್ನಾಟಕವಷ್ಟೇ ಅಲ್ಲದೆ, ಈ ಚಿತ್ರ ಭಾರತದೆಲ್ಲೆಡೆ 7 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗುತ್ತಿದೆ. ಜೊತೆಗೆ 30ಕ್ಕೂ ಹೆಚ್ಚು ದೇಶಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ. ಯುಕೆ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಪ್ರೀಮಿಯರ್ ಶೋಗಳು ಈಗಾಗಲೇ ಘೋಷಣೆಗೊಂಡಿವೆ.
ರಿಷಬ್ ಶೆಟ್ಟಿ ಈ ಚಿತ್ರಕ್ಕೆ ನಿರ್ದೇಶಕ ಹಾಗೂ ನಾಯಕನಾಗಿದ್ದು, ರುಕ್ಮಿಣಿ ವಸಂತ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಗುಲ್ಶನ್ ದೇವಯ್ಯ ವಿಭಿನ್ನ ಪಾತ್ರ ನಿರ್ವಹಿಸಿದ್ದು, ಅಜನೀಶ್ ಲೋಕರಾಜ್ ಸಂಗೀತ ನೀಡಿದ್ದಾರೆ. ಸುಮಾರು 125 ಕೋಟಿ ಬಜೆಟ್‌ನಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, ಓಟಿಟಿ ಹಕ್ಕುಗಳೇ ಬಹು ಕೋಟಿಗಳಲ್ಲಿ ಮಾರಾಟವಾಗಿದೆ.