ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂತಾರ: ಚಾಪ್ಟರ್ 1 ಸಿನಿಮಾ ಹಿಂದಿಯಲ್ಲೂ ಅಬ್ಬರಿಸುತ್ತಿದ್ದು, ಬಿಡುಗಡೆಯಾದ ಮೂರು ದಿನದಲ್ಲಿ 52 ಕೋಟಿ ರೂ. ಗಳಿಸಿದೆ.
ಗುರುವಾರ 18.50 ಕೋಟಿ, ಶುಕ್ರವಾರ 13.50 ಕೋಟಿ ರೂ., ಶನಿವಾರ 20 ಕೋಟಿ ರೂ. ಗಳಿಸಿದೆ. ಮೊದಲ ವಾರದಲ್ಲಿ 70 ಕೋಟಿ ರೂ. ಗಳಿಸುವ ಸಾಧ್ಯತೆಯಿದೆ.
2022ರಲ್ಲಿ ಬಿಡುಗಡೆಯಾದ ಕಾಂತಾರ ಆರಂಭದಲ್ಲಿ ಹಿಂದಿಯಲ್ಲಿ (Hindi) ಕಡಿಮೆ ಸಂಖ್ಯೆಯಲ್ಲಿ ಜನ ವೀಕ್ಷಣೆ ಮಾಡಿದ್ದರು. ನಂತರ ನಿಧಾನವಾಗಿ ಪ್ರಚಾರ ಪಡೆಯುತ್ತಿದ್ದಂತೆ ಅಂತಿಮವಾಗಿ ಅಂದಾಜು 96 ಕೋಟಿ ರೂ. ಗಳಿಸಿತ್ತು. ಎಲ್ಲಾ ಭಾಷೆಗಿಂತಲೂ ಅತಿ ಹೆಚ್ಚು ಕಲೆಕ್ಷನ್ ಹಿಂದಿಯಲ್ಲಿ ಆಗಿತ್ತು. ಟ್ರೆಂಡ್ ಗಮನಿಸಿದರೆ ಈ ಬಾರಿಯೂ ಇದೇ ಪುನಾರವರ್ತನೆಯಾಗುವ ಸಾಧ್ಯತೆಯಿದೆ.
ಮೊದಲ ಕಾಂತಾರ ಸಿನಿಮಾ ಸುಮಾರು 16 ಕೋಟಿ ರೂ.ನಲ್ಲಿ ನಿರ್ಮಾಣಗೊಂಡರೆ ಅಂದಾಜು 400 ಕೋಟಿ ರೂ. ಗಳಿಸಿತ್ತು. ಕಾಂತರ: ಚಾಪ್ಟರ್ 1 ಸಿನಿಮಾವನ್ನು ಅಂದಾಜು 125 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದೆ.