Saturday, September 6, 2025

ʼಕಾಂತಾರ: ಚಾಪ್ಟರ್‌ 1ʼ ರಿಲೀಸ್ ಗೆ ಸಜ್ಜು: ಮಲಯಾಳಂ ರೈಟ್ಸ್‌ ಪಡೆದ ನಟ ಪೃಥ್ವಿರಾಜ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುನಿರೀಕ್ಷಿತ ಚಿತ್ರ, ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಕನ್ನಡದ ʼಕಾಂತಾರ: ಚಾಪ್ಟರ್‌ 1ʼರ ಮಲಯಾಳಂ ಆವೃತ್ತಿಯನ್ನು ಕೇರಳದಲ್ಲಿ ಬಿಡುಗಡೆಗೊಳಿಸಲು ಮಲಯಾಳಂ ಸೂಪರ್‌ ಸ್ಟಾರ್‌ ಪೃಥ್ವಿರಾಜ್‌ ಸುಕುಮಾರನ್ ಮುಂದಾಗಿದ್ದಾರೆ.

ಪೃಥ್ವಿರಾಜ್‌ ಸುಕುಮಾರನ್ ಸ್ಯಾಂಡಲ್‌ವುಡ್‌ ಜತೆಗೆ ಉತ್ತಮ ನಂಟು ಹೊಂದಿದ್ದಾರೆ. ಅದರಲ್ಲಿಯೂ ಕನ್ನಡದ ಹೆಮ್ಮೆಯ ಹೊಂಬಾಳೆ ಫಿಲ್ಮ್ಸ್‌ ಜತೆ ಒಡನಾಟದಲ್ಲಿದ್ದಾರೆ.

ಈ ಬಗ್ಗೆ ಪೃಥ್ವಿರಾಜ್‌ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ʼʼದೈವಿಕ ಪ್ರದರ್ಶನಕ್ಕೆ ಮತ್ತೊಮ್ಮೆ ಹೊಂಬಾಳೆ ಫಿಲ್ಮ್ಸ್‌ ಜತೆ ಕೈ ಜೋಡಿಸಲು ಮುಂದಾಗಿದ್ದೇವೆ. ʼಕಾಂತಾರ: ಚಾಪ್ಟರ್‌ 1ʼ ಸಿನಿಮಾದ ಮಲಯಾಳಂ ಅವತರಣಿಕೆಯನ್ನು ಅಕ್ಟೋಬರ್‌ 2ರಂದು ಕೇರಳ ಥಿಯೇಟರ್‌ಗಳಲ್ಲಿ ನೋಡಿʼʼ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಸುದ್ದಿ ತಿಳಿಸು ಫ್ಯಾನ್‌ ಖುಷಿಯಾಗಿದ್ದಾರೆ.

ಇದನ್ನೂ ಓದಿ