ಹೊಸದಿಗಂತ ಡಿಜಿಟಲ್ ಡೆಸ್ಕ್
ಕಾಂತಾರಾ ಚಾಪ್ಟರ್ 1 ಸಿನಿಮಾ ವೀಕ್ಷಿಸುತ್ತಿದ್ದ ಬಾಲಕಿಯೊಬ್ಬ ಮೈಮೇಲೆ ದೈವಾಹನೆಯಾದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆ ಯಳಂದೂರಿನ ಮಹದೇಶ್ವರ ಚಿತ್ರಮಂದಿರದಲ್ಲಿ ಬಾಲಕಿ ಹಾಗೂ ಕುಟುಂಬಸ್ಥರು ಸಿನಿಮಾ ವೀಕ್ಷಣೆ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ. ಸಿನಿಮಾದಲ್ಲಿ ದೈವದ ದೃಶ್ಯ ಕಂಡು ದೈವಾವೇಶದ ರೀತಿಯಲ್ಲಿ ಬಾಲಕಿ ವರ್ತಿಸಿದೆ. ಈ ವೇಳೆ ಪೋಷಕರು ಸೇರಿದಂತೆ ಪಕ್ಕದಲ್ಲಿದ್ದ ಸಿನಿಮಾ ಪ್ರೇಕ್ಷಕರು ಬಾಲಕಿಯನ್ನು ಹಿಡಿದು ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಮೂರು-ನಾಲ್ಕು ಮಂದಿ ಬಾಲಕಿಯನ್ನು ಹಿಡಿದರೂ ಆವೇಶ ನಿಲ್ಲಿಸಲು ಸಾಧ್ಯವಾಗಿಲ್ಲ.
ಬಾಲಕಿಯ ದೈವಾವೇಶದ ವರ್ತನೆ ಕಂಡು ಪೋಷಕರು ಗಾಬರಿಯಾಗಿದ್ದಾರೆ. ಬಾಲಕಿಯನ್ನು ಸಮಾಧಾನ ಪಡಿಸಲು ಪ್ರಯತ್ನಿಸಲಾಗಿದೆ. ಬಾಲಕಿಯ ಅಜ್ಜಿ ನೀರು ಚಿಮುಕಿಸಿ ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ. ಕೆಲಕಾಲ ಆವೇಶ ಭರಿತಳಾಗಿದ್ದ ಬಾಲಕಿ ಬಳಿಕ ಸಹಜ ಸ್ಥಿತಿಗೆ ಮರಳಿದ್ದಾಳೆ. ಸಹಜ ಸ್ಥಿತಿಗೆ ಮರಳುತ್ತಿದ್ದಂತೆ ಬಾಲಕಿ ಅಸ್ವಸ್ಥಗೊಂಡಿದ್ದಾಳೆ.
ಬಾಲಕಿಯ ದೈವಾವೇಶದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿಗೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾ ಸೇರಿದಂತೆ ಹಲೆವೆಡೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.