Thursday, September 11, 2025

‘ಕಾಂತಾರ: ಚಾಪ್ಟರ್ 1’ ಒಟಿಟಿ ಹಕ್ಕಿನಿಂದ ಬಂದ ದುಡ್ಡಲ್ಲಿ ದೊಡ್ಡ ಸಿನಿಮಾ ತೆಗೀಬೋದು!

‘ಕಾಂತಾರ: ಚಾಪ್ಟರ್ 1’ ಸಿನಿಮಾ ಸೂಪರ್ ಹಿಟ್ ಆಗುವ ಎಲ್ಲಾ ಲಕ್ಷಣ ಗೋಚರವಾಗಿದೆ. ರಿಷಬ್ ಶೆಟ್ಟಿ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಚಿತ್ರಕ್ಕೆ ಅವರದ್ದೇ ನಿರ್ದೇಶನ ಕೂಡ ಇದೆ.

ಸಿನಿಮಾದ ಒಟಿಟಿ ಹಕ್ಕಿನ ಮಾರಾಟ ಬಗ್ಗೆ ದೊಡ್ಡ ಸುದ್ದಿ ಹೊರ ಬಿದ್ದಿದೆ. ಈ ಹಣದಲ್ಲಿ ಮತ್ತೊಂದು ‘ಕೆಜಿಎಫ್ 2’ ನಿರ್ಮಿಸಬಹುದು ಎಂಬ ಮಾತುಗಳು ಕೇಳಿ ಬಂದಿವೆ.

202ರಲ್ಲಿ ಬಂದ ‘ಕಾಂತಾರ’ ದೊಡ್ಡ ಯಶಸ್ಸು ಕಂಡಿತು. ಈ ಚಿತ್ರ ಸೆಪ್ಟೆಂಬರ್ 30ರಂದು ತೆರೆಗೆ ಬಂದಿತ್ತು. ಈ ಸಿನಿಮಾ ಪರಭಾಷೆಯಲ್ಲೂ ಹೆಸರು ಮಾಡಿತು. ಈಗ ಸರಿಯಾಗಿ ಮೂರು ವರ್ಷಗಳ ಬಳಿಕ (ಅಕ್ಟೋಬರ್ 2) ‘ಕಾಂತಾರ’ ಚಿತ್ರದ ಪ್ರೀಕ್ವೆಲ್ ‘ಕಾಂತಾರ: ಚಾಪ್ಟರ್ 1’ ತೆರೆಗೆ ಬರುತ್ತಿದೆ. ಈ ಸಿನಿಮಾದ ಒಟಿಟಿ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟ ಆಗಿದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾದ ಹಕ್ಕನ್ನು ಅಮೇಜಾನ್ ಪ್ರೈಮ್ ವಿಡಿಯೋ ಖರೀದಿ ಮಾಡಿದೆ. ಈ ಸಿನಿಮಾದ ಹಕ್ಕನ್ನು ಖರೀದಿಸಲು ತಂಡಕ್ಕೆ ಪ್ರೈಮ್ ವಿಡಿಯೋ ಕಡೆಯಿಂದ 125 ಕೊಟಿ ರೂಪಾಯಿ ಸಂದಾಯ ಆಗಿದೆ ಎನ್ನಲಾಗುತ್ತಿದೆ. ಈ ಮೊತ್ತದಲ್ಲಿ ಮತ್ತೊಂದು ‘ಕೆಜಿಎಫ್ 2’ ನಿರ್ಮಿಸಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ‘ಕೆಜಿಎಫ್ 2’ ಸಿನಿಮಾದ ಬಜೆಟ್ 100 ಕೋಟಿ ರೂಪಾಯಿ. ಕೆಲವರು ‘ಕೆಜಿಎಫ್ 3’ ಸಿನಿಮಾದ ಬಜೆಟ್​ಗೆ ಇದು ಸರಿ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ