ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಕಾಂತಾರ: ಚಾಪ್ಟರ್ 1’ ಸಿನಿಮಾದ ವಿಶ್ವ ಮಟ್ಟದ ಗಳಿಕೆ 850 ಕೋಟಿ ರೂಪಾಯಿ ಆಸುಪಾಸಿನಲ್ಲಿ ಇದೆ. ಈ ಸಿನಿಮಾದ ಗಳಿಕೆ ಸಾವಿರ ಕೋಟಿ ತಲುಪಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಈ ಸಿನಿಮಾದ ಸಾವಿರ ಕೋಟಿ ತಲುಪೋದಿಲ್ಲ ಎಂದು ಬಾಕ್ಸ್ ಆಫೀಸ್ ಎಕ್ಸ್‌ಪರ್ಟ್ಸ್ ಹೇಳ್ತಿದ್ದಾರೆ. ಇದಕ್ಕೆ ಸ್ಟ್ರಾಂಗ್ ಆದ ಕಾರಣವೂ ಇದೆ. ಅದೇನು ಗೊತ್ತಾ?
ಸಿನಿಮಾ ಅಕ್ಟೋಬರ್ 31ರಂದು ಒಟಿಟಿಗೆ ಬರುತ್ತಿದೆ! ಹೌದು, ತಿಂಗಳಾಂತ್ಯಕ್ಕೆ ಸಿನಿಮಾ ಅಮೇಜಾನ್ ಪ್ರೈಂನಲ್ಲಿ ಪ್ರಸಾರವಾಗಲಿದೆ. ಇದು ಎಷ್ಟೋ ಮಂದಿಗೆ ಖುಷಿ ಕೊಟ್ಟಿದೆ. ಆದರೆ ಇಷ್ಟು ಬೇಗ ಒಟಿಟಿಗೆ ಸಿನಿಮಾ ಬಿಟ್ಟರೆ ಥಿಯೇಟರ್‌ಗೆ ಜನ ಹೋಗೋದಿಲ್ಲ ಎಂದು ಹೇಳಲಾಗುತ್ತಿದೆ.
ಕಾಂತಾರ ಸಿನಿಮಾ ಮನೆಯಲ್ಲಿ ಟಿವಿ ಮುಂದೆ ಕುಳಿತು ನೋಡುವುದಲ್ಲ. ಅದೊಂದು ಥಿಯೇಟರ್ ಎಕ್ಸ್‌ಪೀರಿಯನ್ಸ್. ಥಿಯೇಟರ್‌ನಲ್ಲಿ ನೋಡುವ ಸಂತಸವೇ ಬೇರೆ ಇರುತ್ತದೆ. ಹೀಗಾಗಿ ಒಟಿಟಿಯಲ್ಲಿ ಸಿನಿಮಾ ಇದ್ದರೂ ಜನ ಥಿಯೇಟರ್‌ಗೆ ಹೋಗಬಹುದು ಎಂದು ಕೂಡ ಹೇಳಲಾಗುತ್ತಿದೆ.
CINE | ಕಾಂತಾರ ಚಾಪ್ಟರ್ 1 ಸಾವಿರ ಕೋಟಿ ಮುಟ್ಟೋದಿಲ್ಲ! ಯಾಕೆ ಗೊತ್ತಾ?

