ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಡೇಟಿಂಗ್ ಮೂಲಕ ಮತ್ತೆ ಸುದ್ದಿ ಆಗಿದ್ದಾರೆ. ಅವರು ಅಪ್ರಾಪ್ತೆ ಜೊತೆ ಸುತ್ತಾಟ ನಡೆಸಿರುವುದು ಚರ್ಚೆಗೆ ಕಾರಣ ಆಗಿದೆ.
ಕಾರ್ತಿಕ್ ಆರ್ಯನ್ ಇತ್ತೀಚೆಗೆ ಗೋವಾ ತೆರಳಿದ್ದರು. ಈ ವೇಳೆ ಬೀಚ್ ಸಮೀಪ ಇರುವ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಇದರಲ್ಲಿ ಹುಡುಗಿ ಕೂಡ ಇದ್ದರು. ಇದು ಡೇಟಿಂಗ್ ವದಂತಿ ಹಬ್ಬಿಸಿತ್ತು. ಆದರೆ, ಆ ಹುಡುಗಿ ಯಾರು ಎಂಬುದು ಅಭಿಮಾನಿಗಳಿಗೆ ಸ್ಪಷ್ಟವಾಗಿರಲಿಲ್ಲ. ಈಗ ಅದು ಗೊತ್ತಾಗಿದೆ. ಅವರ ಹೆಸರು ಕರೀನಾ ಕುಬಿಲಿಯುಟೆ. ಇವರಿಗೆ ಇನ್ನೂ 18 ವರ್ಷ ತುಂಬಿಲ್ಲ!
ಕಾರ್ತಿಕ್ ಆರ್ಯನ್ ಫೋಟೋದಲ್ಲಿರೋ ಹುಡುಗಿ ಯಾರು ಎಂಬ ಹುಡುಕಾಟದಲ್ಲಿ ಅಭಿಮಾನಿಗಳಿಕೆ ಕರೀನಾ ಅವರ ಖಾತೆ ಕಂಡಿದೆ. ಅದರಲ್ಲಿ ಕೆಲ ಗೋವಾ ಫೋಟೋಗಳು ಇದ್ದವು. ಕಾರ್ತಿಕ್ ಪೋಸ್ಟ್ ಮಾಡಿದ ಜಾಗದಲ್ಲೇ ಕರೀನಾ ಕೂಡ ಫೋಟೋ ತೆಗೆದುಕೊಂಡು ಪೋಸ್ಟ್ ಮಾಡಿದ್ದರು. ಹೀಗಾಗಿ ಇಬ್ಬರ ಮಧ್ಯೆ ಲಿಂಕ್ ಮಾಡಲಾಗಿದೆ. ಈ ಮೊದಲು ಕರೀನಾ ಅವರು ಕಾರ್ತಿಕ್ನ ಇನ್ಸ್ಟಾಗ್ರಾಮ್ನಲ್ಲಿ ಫಾಲೋ ಮಾಡುತ್ತಿದ್ದರಂತೆ. ಫೋಟೋ ವೈರಲ್ ಆಗುತ್ತಿದ್ದಂತೆ ಅವರು ಅನ್ಫಾಲೋ ಮಾಡಿದ್ದಾರೆ ಎನ್ನಲಾಗಿದೆ.

