Thursday, September 25, 2025

CINE |ಮ್ಯಾಕ್ಸ್‌ ಸಿನಿಮಾ ಡೈರೆಕ್ಟರ್‌ಗೆ ದುಬಾರಿ ಕಾರು ಗಿಫ್ಟ್‌ ಕೊಟ್ಟ ಕಿಚ್ಚ ಸುದೀಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮ್ಯಾಕ್ಸ್‌ ಸಿನಿಮಾ ಸೂಪರ್‌ ಹಿಟ್‌ ಆಗಿದೆ. ಈ ಸಿನಿಮಾದ ನಿರ್ದೇಶಕರಿಗೆ ನಟ ಕಿಚ್ಚ ಸುದೀಪ ದುಬಾರಿ ಕಾರ್‌ ಒಂದನ್ನು ಗಿಫ್ಟ್‌ ಮಾಡಿದ್ದಾರೆ.

ಡೈರೆಕ್ಟರ್‌ ವಿಜಯ್‌ ಕಾರ್ತಿಕೇಯ ಅವರಿಗೆ ಸ್ಕೋಡಾ ಕೈಲಾಕ್‌ ಕಾರ್‌ನ್ನು ಉಡುಗೊರೆಯಾಗಿ ನೀಡಿದ್ದಾರೆ .ಜುಲೈ ತಿಂಗಳಲ್ಲಿ ಸುದೀಪ್‌ ಹೊಸ ಸಿನಿಮಾ ‘ಮಾರ್ಕ್’ ಅನೌನ್ಸ್ ಆಯಿತು. ಕೇವಲ 7 ತಿಂಗಳಲ್ಲಿ ಸಿನಿಮಾ ಶೂಟ್ ಮಾಡಿ, ಜನರ ಎದುರು ತಂದಿಡುವ ಆಲೋಚನೆ ಸುದೀಪ್​ ಹಾಗೂ ತಂಡಕ್ಕೆ ಇದೆ.

ಈ ಕಾರಣದಿಂದಲೇ ವೇಗವಾಗಿ ಸಿನಿಮಾ ಶೂಟ್ ಮಾಡಲಾಗಿದೆ. ಇದಕ್ಕೆ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರ ವೇಗ ಕೂಡ ಕಾರಣ. ಇದು ಸುದೀಪ್​ಗೆ ಇಷ್ಟ ಆಗಿದೆ. ಹೀಗಾಗಿ, ಸ್ಕೋಡಾ ಕಂಪನಿಯ Kylaqನ ‘ಕಾರ್ಬನ್ ಸ್ಟೀಲ್’ ಬಣ್ಣದ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇದನ್ನೂ ಓದಿ