Wednesday, November 5, 2025

ಕಿಂಗ್ ಆಫ್ ರೋಮ್ಯಾನ್ಸ್ @60: ‘ಬಾದ್‌ಶಾ’ ದರುಶನ ಮಿಸ್, ಆದರೂ ನಿರಾಸೆಗೊಳ್ಳದ ಫ್ಯಾನ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ‘ಕಿಂಗ್‌ಖಾನ್’ ಶಾರುಖ್ ಖಾನ್ ಅವರು ತಮ್ಮ 60ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಪ್ರತಿ ವರ್ಷ ನವೆಂಬರ್ 2ರ ಮಧ್ಯರಾತ್ರಿಯಿಂದಲೇ ‘ಮನ್ನತ್’ ನಿವಾಸದ ಬಳಿ ನೆರೆಯುವ ಅಭಿಮಾನಿಗಳಿಗೆ ಬಾಲ್ಕನಿಯಿಂದ ದರ್ಶನ ನೀಡುವ ಸಂಪ್ರದಾಯಕ್ಕೆ ಈ ಬಾರಿ ವಿರಾಮ ಬಿದ್ದಿದೆ.

ಅಧಿಕಾರಿಗಳ ಸೂಚನೆಯ ಮೇರೆಗೆ ಈ ಬಾರಿ ಜನಸಂದಣಿ ನಿಯಂತ್ರಣ ಹಾಗೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ತಪ್ಪಿಸಲು ಶಾರುಖ್ ಖಾನ್ ಅವರು ಮನೆ ಬಳಿ ಬರದಂತೆ ವಿಡಿಯೋ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಹೀಗಾಗಿ, ಈ ಬಾರಿ ‘ಮನ್ನತ್’ ಬಾಲ್ಕನಿ ದರ್ಶನ ಮಿಸ್ ಆಗಿದೆ.

ಅಭಿಮಾನಿಗಳಿಗೆ ವಿಶೇಷ ಧನ್ಯವಾದ ದರ್ಶನ ನೀಡಲು ಸಾಧ್ಯವಾಗದಿದ್ದರೂ, ಕಿಂಗ್‌ಖಾನ್ ಅವರು ತಮ್ಮ ಪ್ರೀತಿಯ ಅಭಿಮಾನಿಗಳನ್ನು ವಿಶೇಷವಾಗಿ ಭೇಟಿಯಾಗಿ, ಸೆಲ್ಫಿ ವಿಡಿಯೋ ಮೂಲಕ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.

ಮುಂದಿನ ಭೇಟಿ ಯಾವಾಗ?

ಅಭಿಮಾನಿಗಳಿಗೆ ಭರವಸೆ ನೀಡಿರುವ ಶಾರುಖ್, ಈ ವರ್ಷ ಭೇಟಿಯಾಗಲು ಆಗದೇ ಇರುವ ಎಲ್ಲರನ್ನೂ ಮುಂದಿನ ದಿನಗಳಲ್ಲಿ ಥಿಯೇಟರ್‌ಗಳಲ್ಲಿ ಹಾಗೂ ಮುಂದಿನ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಖಂಡಿತಾ ಭೇಟಿಯಾಗುವುದಾಗಿ ಬರೆದುಕೊಂಡಿದ್ದಾರೆ.

‘ಕಿಂಗ್’ ಟೀಸರ್ ರಿಲೀಸ್!

ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಶಾರುಖ್ ಖಾನ್ ಅವರು ಬಹು ನಿರೀಕ್ಷಿತ ‘ಕಿಂಗ್’ ಸಿನಿಮಾದ ಟೈಟಲ್ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಟೀಸರ್‌ನಲ್ಲಿ ಕಿಂಗ್‌ಖಾನ್ ಅವರು ಸಂಪೂರ್ಣ ಮಾಸ್ ಮತ್ತು ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ಇದು ಬರ್ತ್‌ಡೇ ಟ್ರೀಟ್ ಆಗಿದೆ.

error: Content is protected !!