Sunday, September 28, 2025

ದಸರಾ ಹಬ್ಬಕ್ಕೆ ಜನರಿಗೆ ಶಾಕ್ ಕೊಟ್ಟ KSRTC: ಬಸ್ ದರ ಇಳಿಸೋ ಬದಲು ಹೆಚ್ಚು ಮಾಡಿದ್ದಾರೆ ನೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರದ ಸಾರಿಗೆ ಇಲಾಖೆ ದಸರಾ ಹಬ್ಬದ ಸಡಗರದ ನಡುವೆ ಬಸ್ ಟಿಕೆಟ್ ದರವನ್ನು ಏರಿಸಿ ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ. ಹಬ್ಬದ ಸಮಯದಲ್ಲಿ ದರ ಇಳಿಕೆ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕಾದ ಜಾಗದಲ್ಲಿ, ಕೆಎಸ್‌ಆರ್‌ಟಿಸಿ ಬಸ್‌ಗಳ ದರವನ್ನು ಹೆಚ್ಚಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಮೈಸೂರು ಮಾರ್ಗ ಸೇರಿದಂತೆ ಹಲವು ದಾರಿಗಳಲ್ಲಿ ಟಿಕೆಟ್ ದರ ಬರೋಬ್ಬರಿ 20 ರೂಪಾಯಿವರೆಗೆ ಏರಿಸಲಾಗಿದೆ. ವೇಗದೂತ, ತಡೆರಹಿತ, ರಾಜಹಂಸ, ಐರಾವತ ಹಾಗೂ ಐರಾವತ ಕ್ಲಬ್ ಕ್ಲಾಸ್ ಸೇರಿದಂತೆ ಎಲ್ಲಾ ಬಸ್‌ಗಳಲ್ಲಿ ಈ ಏರಿಕೆ ಜಾರಿಯಲ್ಲಿದ್ದು, ದಸರಾ ಹಬ್ಬ ಮುಗಿಯುವವರೆಗೆ ಮುಂದುವರಿಯಲಿದೆ.

ಹೊಸ ದರ ವಿವರಗಳು ಹೀಗಿವೆ:
ಕರ್ನಾಟಕ ಸಾರಿಗೆ ವೇಗದೂತ: 170 ರಿಂದ 190
ತಡೆರಹಿತ ಸಾರಿಗೆ: 210 ರಿಂದ 240
ರಾಜಹಂಸ: 270 ರಿಂದ 290
ಐರಾವತ: 430 ರಿಂದ 450
ಐರಾವತ ಕ್ಲಬ್ ಕ್ಲಾಸ್: 440 ರಿಂದ 460

ಪ್ರಯಾಣಿಕರು ಈ ಏರಿಕೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದು, ಹಬ್ಬದ ಸಂದರ್ಭದಲ್ಲಿ ಸರ್ಕಾರವು ಶಾಕ್ ನೀಡಿರುವುದು ಅಸಮಂಜಸ ಎಂದು ಆರೋಪಿಸಿದ್ದಾರೆ. ಸಾರ್ವಜನಿಕರ ನಿರೀಕ್ಷೆಯಂತೆ ಹಬ್ಬದ ಸಂಭ್ರಮವನ್ನು ಗಮನಿಸಿ ದರ ಇಳಿಕೆ ಮಾಡಬೇಕಾದ ಜಾಗದಲ್ಲಿ ದರ ಹೆಚ್ಚಿಸಿರುವುದು ಜನರಲ್ಲಿ ನಿರಾಸೆ ಮೂಡಿಸಿದೆ.